ಸೋಮವಾರ, ಜೂನ್ 21, 2021
30 °C

ಮಂಡ್ಯ: ‘ಮರಾಠಿ ಮಾತನಾಡು’ ಎಂದ ಬ್ಯಾಂಕ್‌ ಅಧಿಕಾರಿಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ತಾಲ್ಲೂಕಿನ ಕೆರಗೋಡು ಬ್ಯಾಂಕ್‌ ಆಫ್‌ ಬರೋಡ ಶಾಖೆಯಲ್ಲಿ, ಗ್ರಾಹಕರೊಬ್ಬರಿಗೆ ಮರಾಠಿ ಮಾತನಾಡುವಂತೆ ಹೇಳಿದ ಬ್ಯಾಂಕ್‌ ಅಧಿಕಾರಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಿಎಂ ಕಿಸಾನ್‌ ಯೋಜನೆ ಹಣ ಪಡೆಯಲು ರೈತ ಸೋಮಶೇಖರ್‌ ಈಚೆಗೆ ಬ್ಯಾಂಕ್‌ ಶಾಖೆಗೆ ತೆರಳಿದ್ದರು. ಇಲ್ಲಿಯ ಸಹಾಯಕ ವ್ಯವಸ್ಥಾಪಕ ಗಿರೀಶ್‌ ಹಿಂದಿಯಲ್ಲಿ ವ್ಯವಹರಿಸುತ್ತಿದ್ದರು. ಕನ್ನಡ ಕಲಿಯುವಂತೆ ಅವರಿಗೆ ತಿಳಿಸಿದಾಗ ಸಿಟ್ಟಿಗೆದ್ದ ಆ ಅಧಿಕಾರಿ, ಮರಾಠಿ ಕಲಿಯುವಂತೆ ತಾಕೀತು ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೋಮಶೇಖರ್‌ ಸೇರಿ ಸ್ಥಳೀಯರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಧಿಕಾರಿ ಹಾಗೂ ಸ್ಥಳೀಯರಿಗೆ ಮಾತಿನ ಚಕಮಕಿ ನಡೆದಿದೆ. ‘ಕರ್ನಾಟಕಕ್ಕೆ ಬಂದು ಕೆಲಸ ಮಾಡುತ್ತಿರುವ ಅಧಿಕಾರಿ ಕನ್ನಡ ಕಲಿತು ವ್ಯವಹರಿಸಬೇಕು. ಅದನ್ನು ಬಿಟ್ಟು ಮರಾಠಿ ಕಲಿಯವಂತೆ ಉದ್ಧತಟನದಿಂದ ಮಾತನಾಡಿದ್ದಾರೆ’ ಎಂದು ಸೋಮಶೇಖರ್‌ ಆಕ್ರೋಶ ವ್ಯಕ್ತಪಡಿಸಿದರು. ಆ ಬಳಿಕ ಶಾಖಾ ವ್ಯವಸ್ಥಾಪಕರು ಕ್ಷಮೆ ಕೇಳಿ, ಸಮಾಧಾನಪಡಿಸಿದ್ದಾರೆ.

ಸಹಾಯಕ ವ್ಯವಸ್ಥಾಪಕ ಗಿರೀಶ್‌, ಘಟನೆ ಕುರಿತು ಸೋಮವಾರ ಕ್ಷಮೆ ಕೋರಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು