ಗುರುವಾರ , ಅಕ್ಟೋಬರ್ 17, 2019
24 °C

ನಮ್ಮವರೇ ನಮ್ಮನ್ನು ತುಳಿದರು: ಹೊರಟ್ಟಿ

Published:
Updated:

ಮಂಡ್ಯ: ‘ನಮ್ಮ ಪಕ್ಷದವರೇ ನಮ್ಮನ್ನು ತುಳಿದರು. ಅಧಿಕಾರ ಇದ್ದಾಗ ನಮಗೆ ಅವಕಾಶ ನೀಡಲಿಲ್ಲ. ನಮಗೆ ಸೂಕ್ತ ಸ್ಥಾನಮಾನ ನೀಡಿದ್ದರೆ ಜೆಡಿಎಸ್‌ ಇಂದು ಪ್ರವರ್ಧಮಾನದಲ್ಲಿ ಇರುತ್ತಿತ್ತು’ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಬುಧವಾರ ಇಲ್ಲಿ ಬೇಸರ ವ್ಯಕ್ತಪಡಿಸಿದರು.

‘ಜೆಡಿಎಸ್‌ನಲ್ಲಿ ಹಿರಿಯ ಮುಖಂಡರಿದ್ದಾರೆ. ಅವರಿಗೆ ಸ್ಥಾನ ನೀಡಿದ್ದರೆ ಪಕ್ಷಕ್ಕೆ ಅನುಕೂಲವಾಗುತ್ತಿತ್ತು. ಅವರಿಗೆ ಅವಕಾಶ ಸಿಗಲಿಲ್ಲ, ಪಕ್ಷದ ಅಧಿಕಾರವೂ ಉಳಿಯಲಿಲ್ಲ. ನಾವು ಸದನದಲ್ಲಿ ಯಾವುದೇ ಸಮಸ್ಯೆ ಬಗ್ಗೆ ಮಾತನಾಡಿದಾಗ ನಮ್ಮ ಪಕ್ಷದವರೇ ಟೀಕೆ ಮಾಡುತ್ತಿದ್ದರು. ಹೀಗಾಗಿ ನಾವು ಕೆಳಹಂತದಲ್ಲೇ ಉಳಿಯುವಂತಾಯಿತು’ ಎಂದರು.

Post Comments (+)