ಸೋಮವಾರ, ಜನವರಿ 25, 2021
16 °C

ಕರಡಿ ಪ್ರತ್ಯಕ್ಷ: ಜನರಲ್ಲಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಲಗೂರು: ಸಮೀಪದ ಬಸವನಬೆಟ್ಟ ಅರಣ್ಯ ಪ್ರದೇಶದಿಂದ ಬಂದ ಎರಡು ಕರಡಿಗಳು ಹಲಗೂರಿನ ಪ್ರಮುಖ ರಸ್ತೆಯಲ್ಲಿ ಓಡಾಡಿರುವ ಘಟನೆ ನಡೆದಿದೆ.

ಹಲಗೂರು ನಿವಾಸಿ ಅಲ್ತಾಫ್ ಪಾಷಾ ರೇಷ್ಮೆ ಗೂಡು ವ್ಯಾಪಾರಕ್ಕಾಗಿ ಬೆಳಗಿನ ಜಾವ ಆರು ಗಂಟೆಯಲ್ಲಿ ಹಲಗೂರಿನ ಪ್ರಮುಖ ವೃತ್ತದಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಪ್ರತ್ಯಕ್ಷಗೊಂಡ ಎರಡು ಕರಡಿಗಳು ಅಲ್ತಾಫ್ ಪಾಷಾ ಅವರಿಗೆ ಹಿಂಬದಿಗೆ ಗುದ್ದಿ ಸಣ್ಣ ಗಾಯ ಮಾಡಿದೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ನಾಯಿಗಳ ಬೊಗಳುವಿಕೆಯಿಂದ ಹೆದರಿದ ಕರಡಿಗಳು ತಕ್ಷಣ ಗಾಬರಿಗೊಳಗಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕಡೆ ಓಡಿ ಹೋಗಿವೆ.

ಕರಡಿಗಳ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದು, ಇನ್ನೂ ಕರಡಿಗಳು ಪತ್ತೆಯಾಗಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.