ಮಂಡ್ಯ: ಚಿರತೆಯೊಂದು ಮನೆ ಬಳಿ ಕಟ್ಟಿ ಹಾಕಿದ್ದ ಹಸುವನ್ನು ತಿಂದು ಹಾಕಿದ ಘಟನೆ ತಾಲ್ಲೂಕಿನ ಬೆಳ್ಳೂಂಡಗೆರೆ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಗ್ರಾಮದ ರೈತ ವೆಂಕಟೇಶ್ ಅವರು ಮನೆ ಹಿಂಭಾಗ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ತಿಂದು ಹಾಕಿದೆ. ಹಗಲು ಹೊತ್ತಿನಲ್ಲಿಯೇ ಈ ರೀತಿ ಚಿರತೆ ಗ್ರಾಮದಲ್ಲಿ ಪ್ರತ್ಯಕ್ಷರಾಗಿರುವುದಕ್ಕೆ ಗ್ರಾಮಸ್ಥರು ಭಯಭೀತರಾಗಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದು ಮಂಡ್ಯ ವಲಯ ಅರಣ್ಯಾಧಿಕಾರಿ ಆರ್‌ಎಫ್‌ಒ ಶೈಲಜಾ ಸೇರಿದಂತೆ ಸಿಬ್ಬಂದಿಯು ಸ್ಥಳ ಪರಿಶೀಲನೆ ನಡೆಸಿದರು. ನಂತರ ಬೋನು ಇಟ್ಟು ಚಿರತೆ ಸೆರೆಗೆ ಕ್ರಮ ವಹಿಸಿದ್ದಾರೆ.