ಭಾರತೀನಗರ: ಹಬ್ಬ, ಜಾತ್ರೆಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

ಕೆ.ಎಂ.ದೊಡ್ಡಿಯ ಬಣ್ಣಾರಿ ಮಾರಮ್ಮ ದೇವಿಯ 45ನೇ ವಿಶೇಷ ಪೂಜಾ ಮಹೋತ್ಸವದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

‘ಮನುಷ್ಯರಾದ ನಾವು ದೇವರನ್ನು ನೆನೆದರೆ ಶಾಂತಿ, ನೆಮ್ಮದಿ ಸಿಗುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರೆಯುವುದರ ಜೊತೆಗೆ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಆದ್ದರಿಂದ ಯಾರಿಗೂ ಕೇಡು ಬಯಸಬಾರದು’ ಎಂದು ಸಲಹೆ ನೀಡಿದರು

ಕಾರ್ಯಕ್ರಮಕ್ಕೂ ಮುನ್ನ ಪ್ರಶಾಂತ್ ಶಾಲೆಯಿಂದ ಅಮ್ಮನವರ ಕರಗವನ್ನು ತಂದು ನಂತರ ಅಲಂಕರಿಸಿ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೀಡಿ ಪ್ರಸಾದ ವಿನಿಯೋಗ ಮಾಡಲಾಯಿತು.

ಚಿಕ್ಕರಸಿನಕೆರೆ ಬಸವಪ್ಪನ ಉಪಸ್ಥಿತಿಯಲ್ಲಿ ಬೆಳ್ಳಿರಥದಲ್ಲಿ ಬಣ್ಣಾರಿ ಮಾರಮ್ಮ ದೇವಿಯನ್ನು ಜಾನಪದ ಕಲಾತಂಡಗಳೊಂದಿಗೆ ಭಾರತೀನಗರದ ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ಮೆರವಣಿಗೆ ಮೂಲಕ ಕರೆತಂದು ಪೂಜೆ ಸಲ್ಲಿಸಲಾಯಿತು.

ಮಧ್ಯಾಹ್ನದ ನಂತರ ಅನ್ನಸಂತರ್ಪಣೆ ನೆರವೇರಿತು. ಸಂಜೆ ಬಣ್ಣಾರಿ ಮಾರಮ್ಮನ ಕರಗ ಮೆರವಣಿಗೆ ಹೊರಟು ನಂತರ ಕರಗವನ್ನು ವಿಸರ್ಜನೆ ಮಾಡಲಾಯಿತು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ವೆಂಕಟೇಶ್, ಕೆ.ಟಿ.ಸುರೇಶ್, ವಿನು, ಬಣ್ಣಾರಿ ಮಾರಮ್ಮನ ಪೂಜಾ ಸಮಿತಿಯ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ಎಸ್.ಬಾಬು, ಎಂ.ಮುರುಗೇಶ್ ಸದಸ್ಯರಾದ ದೀಪು, ರಂಜು, ನಾಗರಾಜು, ವಿಶಾಲ್, ಪರಮೇಶ, ಗುರು, ರಾಜು, ಕಿರಣ್, ಕುಶಾಲ್, ಗೋಕುಲ್, ಅಭಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-40-572744632

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.