ಕಬ್ಬಿನ ಕಟಾವಿಗೆ ವಿಜಯಪುರ ಜಿಲ್ಲೆಯಿಂದ ಕುಟುಂಬ ಸಮೇತ ವಿ.ರಮೇಶ್ ನಾಯಕ್ ತಾಲ್ಲೂಕಿನ ದೇವಿಪುರ ಗ್ರಾಮದಲ್ಲಿ ಉಳಿದುಕೊಂಡಿದ್ದರು. ಅವರು ಬೈಕ್‌ನಲ್ಲಿ ಭಾನುವಾರ ರಾತ್ರಿ ತೆರಳುತ್ತಿದ್ದಾಗ ನೆಲಮಾಕನಹಳ್ಳಿ ಗೇಟ್ ಬಳಿ ಎತ್ತಿನಗಾಡಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಗಂಭೀರ ಗಾಯಗೊಂಡು ವಿ.ರಮೇಶ್ ನಾಯಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.