ಶುಕ್ರವಾರ, ಏಪ್ರಿಲ್ 16, 2021
21 °C

ಬೊಪ್ಪೇಗೌಡನಪುರ: ಮಂಟೇಸ್ವಾಮಿ ಜಾತ್ರೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳವಳ್ಳಿ: ‘ತಾಲ್ಲೂಕಿನ ಬೊಪ್ಪೇಗೌಡನಪುರ (ಬಿಜಿಪುರ) ಗ್ರಾಮದಲ್ಲಿ ಪ್ರತಿ ವರ್ಷ ನಡೆಯುತ್ತಿದ್ದ ಐತಿಹಾಸಿಕ ಪವಾಡ ಪುರುಷ ಮಂಟೇಸ್ವಾಮಿ ಜಾತ್ರಾ ಮಹೋತ್ಸವವನ್ನು ಜಿಲ್ಲಾಡಳಿತದ ಆದೇಶದಂತೆ ರದ್ದುಪಡಿಸಲಾಗಿದೆ’ ಎಂದು ಮಂಟೇಸ್ವಾಮಿ ಮಠಾಧಿಪತಿ ಜ್ಞಾನಾನಂದ ಚೆನ್ನರಾಜೇ ಅರಸ್ ತಿಳಿಸಿದರು.

‘ಪ್ರತಿ ವರ್ಷ ಯುಗಾದಿ ಹಬ್ಬದ ಹಿಂದಿನ ದಿನ ಕಪ್ಪಡಿ ಜಾತ್ರೆ ಮುಗಿಸಿ ಬರುವ ಮಠಾಧಿಪತಿಗಳು ಬಿಜಿಪುರ ಮಠವನ್ನು ಪ್ರವೇಶಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವ ಪದ್ಧತಿ ಇತ್ತು. ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದರು. ಆದರೆ, ಕೋವಿಡ್‌ ಎರಡನೇ ಅಲೆ ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತದ ಆದೇಶದಂತೆ ಜಾತ್ರೆ ರದ್ದುಪಡಿಸಲಾಗಿದೆ’ ಎಂದರು.

‘‌ಎ.11 ರಂದು ಎದಿರು ಸೇವೆ, ಏ.14ರಿಂದ 26ರವರೆಗೆ ನಡೆಯಬೇಕಿದ್ದ ವಿವಿಧ ಪಂಕ್ತಿ ಸೇವೆಗಳ ಉತ್ಸವಗಳನ್ನು ಸಹ ರದ್ದುಪಡಿಸಿದ್ದು, ಮಂಟೇಸ್ವಾಮಿಯ ಭಕ್ತರು ಮನೆಯಲ್ಲೇ ಸ್ವಾಮಿಗೆ ಧೂಪದ ಆರತಿ ಬೆಳಗುವ ಮೂಲಕ ಹಬ್ಬವನ್ನು ಆಚರಣೆ ಮಾಡಬೇಕು’ ಎಂದು ಜ್ಞಾನಾನಂದ ಚೆನ್ನರಾಜೇ ಅರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.