ನಗದು, ಚಿನ್ನಾಭರಣ ಕಳವು

7
ಸರಣಿ ಕಳ್ಳತನ; 10 ಮನೆಗಳಲ್ಲಿ ಕೃತ್ಯ

ನಗದು, ಚಿನ್ನಾಭರಣ ಕಳವು

Published:
Updated:
Deccan Herald

ನಾಗಮಂಗಲ: ತಾಲ್ಲೂಕಿನ ಬೆಳ್ಳೂರು ಕ್ರಾಸ್‌ನ ಬಿ.ಜಿ.ನಗರದಲ್ಲಿರುವ ಆದಿಚುಂಚನಗಿರಿ ಟ್ರಸ್ಟ್‌ಗೆ ಸೇರಿದ ವಸತಿಗೃಹಗಳಲ್ಲಿ ತಡರಾತ್ರಿ 10ಕ್ಕೂ ಹೆಚ್ಚು ಮನೆಗಳಲ್ಲಿ ಸರಣಿ ಕಳ್ಳತನವಾಗಿದೆ.

ಮಹಾಲಯ ಅಮಾವಾಸ್ಯೆ ಮತ್ತು ಸಾಲು ರಜೆಗಳಿರುವುದರಿಂದ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ವಿವಿಧ ಕಾಲೇಜುಗಳಲ್ಲಿ ಕೆಲಸ ಮಾಡುವ ನೌಕರರು ತಮ್ಮ ಊರುಗಳಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

‘ಎಚ್‘ ಬ್ಲಾಕ್‌ನಲ್ಲಿರುವ ಪ್ರಕಾಶ್ ಅವರ ಮನೆಯಲ್ಲಿ ₹ 2 ಲಕ್ಷ , 50 ಗ್ರಾಂ ಚಿನ್ನದ ಒಡವೆ ಮತ್ತು ದೇವರಾಜು ಅವರ ಮನೆಯಲ್ಲಿ 2 ಕೆ.ಜಿ. ಬೆಳ್ಳಿ ಕಳ್ಳತನವಾಗಿದೆ. ‘ಎಚ್’ ಬ್ಲಾಕ್‌ನಿಂದ ‘ಝಡ್’ ಬ್ಲಾಕ್‌ವರೆಗೆ ಇರುವ ಒಟ್ಟು 10 ಮನೆಗಳಲ್ಲಿ ಕಳ್ಳತನ ನಡೆದಿದೆ. ಡಾ.ತೇಜಸ್ವಿನಿ ಅವರ ಮನೆಯಲ್ಲಿ 60 ಗ್ರಾಂ ಚಿನ್ನ ಕಳವಾಗಿದೆ. ಹರೀಶ್, ಹೇಮ, ಲಕ್ಷ್ಮಣ, ಪರಮೇಶ್ ಮತ್ತು ಜಗದೀಶ್ ಮನೆಗಳಲ್ಲಿ ಕಳ್ಳತನ ನಡೆದಿದೆ. 4 ಮನೆಗಳಲ್ಲಿ ಕಳ್ಳರಿಗೆ ಏನು ಸಿಕ್ಕಿಲ್ಲ. ಒಟ್ಟು ₹ 3.60 ಲಕ್ಷ ನಗದು, 110 ಗ್ರಾಂ ಚಿನ್ನ ಮತ್ತು  2 ಕೆ.ಜಿ. ಬೆಳ್ಳಿ ಕಳ್ಳತನವಾಗಿದೆ.

ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಸತಿ ಗೃಹಗಳಿದ್ದು, ಇದರ ಆವರಣದಲ್ಲಿ ಆದಿಚುಂಚನಗಿರಿ ಟ್ರಸ್ಟ್ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸದಿರುವುದು ಮತ್ತು ವಯಸ್ಸಾದ ಕಾವಲುಗಾರರು ಇರುವುದರಿಂದ ಕಳ್ಳತನ ನಡೆದಿದೆ ಎಂದು ನಿವಾಸಿಗಳು ಹೇಳುತ್ತಾರೆ.

ಸಿಪಿಐ ನಂಜಪ್ಪ ಮತ್ತು ಪಿಎಸ್‌ಐ ಶರತ್ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದರು. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !