ಬುಧವಾರ, ಏಪ್ರಿಲ್ 14, 2021
25 °C

ಮಳವಳ್ಳಿ: ದಂಪತಿ ಅಡ್ಡಗಟ್ಟಿ ಚಿನ್ನದ ಸರ ದರೋಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಳವಳ್ಳಿ: ಸ್ವಗ್ರಾಮದಿಂದ ಬೈಕ್‌ನಲ್ಲಿ ತೆರಳುತ್ತಿದ್ದ ದಂಪತಿಯನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿ ದರೋಡೆ ಮಾಡಿರುವ ಘಟನೆ ತಾಲ್ಲೂಕಿನ ಬೆಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ತಿ.ನರಸೀಪುರ ತಾಲ್ಲೂಕಿನ ತಲಕಾಡು ಹೋಬಳಿಯ ಶಂಭುದೇವನಪುರ ಗ್ರಾಮದ ಲೋಕೇಶ್ ಎಂಬುವರ ಪತ್ನಿ ಲತಾ ಮಾಂಗಲ್ಯಸರ ಕಳೆದುಕೊಂಡ ಮಹಿಳೆ.

ಸ್ವಗ್ರಾಮದಿಂದ ಸೋಮವಾರ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಬಿಜಿಪುರ ಹೋಬಳಿಯ ಮುಟ್ಟನಹಳ್ಳಿ ಸಮೀಪದ ನಿಜಲಿಂಗಪ್ಪ ಎಂಬುವರ ತೋಟದ ಬಳಿ ಎರಡು ಬೈಕ್‌ನಲ್ಲಿ ಹಿಂಬಾಲಿಸಿದ ನಾಲ್ವರು ದುಷ್ಕರ್ಮಿಗಳು ದಂಪತಿಯನ್ನು ಅಡ್ಡಗಟ್ಟಿ ಲತಾ ಅವರ 50 ಗ್ರಾಂ ತೂಕದ ಚಿನ್ನದಸರ ಹಾಗೂ ಮೊಬೈಲ್ ಕಸಿದುಕೊಂಡಿದ್ದಾರೆ. ಪ್ರತಿರೋಧ ವ್ಯಕ್ತಪಡಿಸಿದ
ಲೊಕೇಶ್ ಮತ್ತು ಲತಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ನಾಲ್ಕು
ಜನರ ಪೈಕಿ ಒಬ್ಬ ಹೆಲ್ಮೆಟ್‌ ಹಾಕಿಕೊಂಡಿದ್ದ.

ಗಾಯಗೊಂಡಿದ್ದ ದಂಪತಿ ಬೆಳಕವಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಎಚ್.ಲಕ್ಷ್ಮಿನಾರಾಯಣಪ್ರಸಾದ್, ಸಿಪಿಐ ಡಿ.ಪಿ.ಧನರಾಜ್, ಪಿಎಸ್ಐ ಹನುಮಂತಕುಮಾರ್ ಭೇಟಿ ಪರಿಶೀಲನೆ ನಡೆಸಿದರು.

ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ನಡೆದಿರುವ ಘಟನೆಯಿಂದ ಮುಟ್ಟನಹಳ್ಳಿ ಅಕ್ಕ-ಪಕ್ಕದ ಜನರಲ್ಲಿ ಆತಂಕ ಮನೆ ಮಾಡಿದೆ. ಒಂದು
ವಾರದಲ್ಲಿ ತಾಲ್ಲೂಕಿನಲ್ಲಿ ನಡೆದಿರುವ ಐದನೇ ಸರ ಕಳವು ಪ್ರಕರಣ ಇದಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.