ಮಂಡ್ಯ: ‘ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಗೆ ಬಿಡುಗಡೆ ಮಾಡಿರುವ ₹10 ಸಾವಿರ ಕೋಟಿ ಅನುದಾನದ ಲೆಕ್ಕವನ್ನು ಜಿಲ್ಲೆಯ ಜನ ಕೇಳಬೇಕೇ ಹೊರತು ಸಂಸದರಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ತಿರುಗೇಟು ನೀಡಿದರು.

ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಬಳಿ 220 ಕೆ.ವಿ ಸಬ್ ಸ್ಟೇಷನ್ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ಅನುದಾನದ ಅಂಕಿ ಅಂಶಗಳನ್ನು ಇಲಾಖಾವಾರು ನೀಡುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಲೆಕ್ಕ ಕೇಳಿದ್ದಾರೆ. ಅವರು ನಮ್ಮ ಜಿಲ್ಲೆಯವರಲ್ಲ, ಈ ಜಿಲ್ಲೆಗೆ ಎಂ.ಪಿ. ಮಾತ್ರ. ಕುಮಾರಸ್ವಾಮಿ ಅವರಿಗೆ ಜಿಲ್ಲೆಯ ಜನ ಜವಾಬ್ದಾರಿ ನೀಡಿದ್ದು ಕೆಲಸ ಮಾಡಬೇಕು ಅಷ್ಟೆ’ ಎಂದು ಕುಟುಕಿದರು.

ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಜಿಲ್ಲೆಯ ಜನತೆ ಕುಮಾರಸ್ವಾಮಿ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಜನರ ನಿರೀಕ್ಷೆ ಹುಸಿಯಾಗದಂತೆ ಕೇಂದ್ರ ಸಚಿವರು ಕೆಲಸ ಮಾಡಲಿ. ಲೆಕ್ಕ ಕೊಡುವ ಸಮಯ ಬರುತ್ತದೆ ಆಗ ಅಂಕಿ ಅಂಶಗಳ ಪ್ರಕಾರ ನೀಡಲಾಗುವುದು ಎಂದರು.

ಮೋದಿ ಹೊಣೆ ಅಲ್ಲ...

‘ಗ್ಯಾಸ್ ಸಮಸ್ಯೆಗೆ ಮೋದಿಯವರೇ ಹೊಣೆ ಅಲ್ಲ. ಟ್ರಂಪ್ ಯಾರ ಮಾತೂ ಕೇಳಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ವಿಶ್ವಗುರು ಎನಿಸಿಕೊಂಡಿರುವ ಮೋದಿ ಅವರು ಇಂಥ ಸಂದರ್ಭದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ ಅಷ್ಟೆ. ಅವರು ಏಕೆ ಮೌನವಾಗಿದ್ದಾರೆ ಎನ್ನುವ ಪ್ರಶ್ನೆ ಬರುತ್ತದೆ. ವಾಣಿಜ್ಯ ಬಳಕೆ ಸಿಲಿಂಡರ್ಗೆ ಸಮಸ್ಯೆ ಆಗಿರುವುದು ನಿಜ’ ಎಂದರು.

‘ಹೊಸ ಶಾಸಕರು ಸಚಿವ ಸ್ಥಾನ ಕೇಳಿರುವುದರಲ್ಲಿ ತಪ್ಪೇನಿದೆ. ಜಿಲ್ಲಾವಾರು, ಜಾತಿವಾರು ಎಲ್ಲವನ್ನೂ ನೋಡಿ ಸಚಿವ ಸ್ಥಾನ ನೀಡಬೇಕು. ನಮ್ಮ ಪಕ್ಷ ಮುಕ್ತವಾಗಿದೆ. ಸಿಎಂ ಮತ್ತು ಡಿಸಿಎಂ ಇಬ್ಬರೂ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಹಳಬರಿಗೆ ಕೋಕ್ ಕೊಡುವ ಬಗ್ಗೆಯೂ ಪಕ್ಷವೇ ನಿರ್ಧರಿಸುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.