ಹಲಗೂರು: ಸಮೀಪದ ಚಿಲ್ಲಾಪುರ ಗ್ರಾಮದಲ್ಲಿರುವ ಸಿದ್ದಪ್ಪಾಜಿ ದೇವಸ್ಥಾನದ ಮೊದಲ ವರ್ಷದ ವಾರ್ಷಿಕೋತ್ಸವ ಮತ್ತು ದೊಡ್ಡಮ್ಮ ತಾಯಿ ಗದ್ದುಗೆಗೆ ರಜತ ಕಲಶ, ಮುಖವಾಡ ಸ್ಥಾಪನೆ ಕಾರ್ಯಕ್ರಮ ಶುಕ್ರವಾರ ಭಕ್ತಿಪೂರ್ವಕವಾಗಿ ನಡೆಯಿತು.

ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ವೇದ ಪಾರಾಯಣ, ಮಹಾ ಸಂಕಲ್ಪ, ಪುಣ್ಯಾಹ ವಾಚನ, ಮಾತೃಕಾ ಪೂಜೆ, ನವಗ್ರಹಾರಾಧನೆ, ಕಲಶಾರ್ಚನೆ, ಅಗ್ನಿಮುಖ, ಮಹಾ ಗಣಪತಿ ಹೋಮ, ನವಗ್ರಹಾದಿ ಹೋಮ, ವಾಸ್ತು ಶಾಂತಿ, ಪರಿವಾರ, ದೇವತಾ ಹೋಮ ಹವನ ಪೂಜಾ ಕಾರ್ಯಕ್ರಮಗಳು ನಡೆದವು.

ಸಿದ್ದಪ್ಪಾಜಿ ದೇವರ ಹೋಮ, ವಿಶ್ವಕರ್ಮ ಹೋಮ, ದೇವರಿಗೆ ಅಭಿಷೇಕ ಅಲಂಕಾರ, ಜಯಾದಿ, ಪೂರ್ಣಾಹುತಿ, ಕಲಾಶಾಭಿಷೇಕ ಆಲಂಕಾರ, ಮಹಾ ಮಂಗಳಾರತಿ, ಮಂತ್ರ ಪುಷ್ಪ, ಅಷ್ಟಾವಧಾನ, ಶ್ರೀರಾಮ ನವಮಿ ಆಚರಣೆ ನಡೆಯಿತು. ಮಧ್ಯಾಹ್ನ ಭಕ್ತರಿಗೆ ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ನಡೆಯಿತು.

ಸಂಜೆ 5 ಗಂಟೆಗೆ ಚಿಲ್ಲಾಪುರ ಗ್ರಾಮದಲ್ಲಿರುವ ಕಾದಗಟ್ಟಿ ಸ್ಥಳದಿಂದ ಸಿದ್ದಪ್ಪಾಜಿ ದೇವಾಲಯದವರೆಗೆ ನೂರಾರು ಮಹಿಳೆಯರು ಬೆಲ್ಲದ ಅರತಿಯನ್ನು ಮೆರವಣಿಗೆಯಲ್ಲಿ ತಂದು ದೇವರಿಗೆ ಅರತಿ ಬೆಳಗಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಹಲಗೂರು, ಚಿಲ್ಲಾಪುರ, ಒದುಬಸಪ್ಪನದೊಡ್ಡಿ, ತೊರೆಕಾಡನಹಳ್ಳಿ, ಮಾರಗೌಡನಹಳ್ಳಿ, ಎನ್.ಕೋಡಿಹಳ್ಳಿ, ಹುಸ್ಕೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವಿಶ್ವಕರ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಈಶ್ ಕುಮಾರ್, ಕಾರ್ಯದರ್ಶಿ ರಾಮಚಂದ್ರಚಾರ್, ಖಜಾಂಚಿ ಎಚ್.ಕೆ.ಸಿದ್ದಪ್ಪಾಜಿ, ಮುಖಂಡರಾದ ಎಚ್.ಕೆ.ಮೂರ್ತಿ, ಉಮೇಶ್, ಮರಿಯಾಚಾರ್, ಸ್ವಾಮಿ, ಪುಟ್ಟಸ್ವಾಮಿ, ಅಪ್ಪಾಜಾಚಾರ್, ಸಾಗರ್, ಶಿವು, ಪಲ್ಲವಿ, ಅಣ್ಣಯ್ಯ ಸ್ವಾಮಿ, ಶಂಕರ್, ಮರಿಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-40-1115098035

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.