ಕಿಕ್ಕೇರಿ: ಹೋಬಳಿಯ ಸಾಸಲು ಗ್ರಾಮದ ಎರಡೂ ದೇಗುಲಗಳ ಹುಂಡಿ ಹಣವನ್ನು ಶನಿವಾರ ಎಣಿಕೆ ನಡೆಸಲಾಯಿತು. ಒಟ್ಟು ₹ 12,16,391 ಸಂಗ್ರಹವಾಗಿದೆ.

ಮುಜರಾಯಿ ಇಲಾಖೆಯ ಸೋಮೇಶ್ವರ, ಶಂಭುಲಿಂಗೇಶ್ವರ ದೇಗುಲಗಳ ಹುಂಡಿ ಎಣಿಕೆ ಕಾರ್ಯ ಮುಜರಾಯಿ ಅಧಿಕಾರಿ ತಹಶೀಲ್ದಾರ್ ಅಶೋಕ್ ಮಾರ್ಗದರ್ಶನದಲ್ಲಿ ಉಪತಹಶೀಲ್ದಾರ್ ವೀಣಾ ನೇತೃತ್ವದಲ್ಲಿ ದೇಗುಲ ಆವರಣದಲ್ಲಿ ನಡೆಯಿತು. ಹುಂಡಿ ಹಣ ಕಳವು ಹಿನ್ನೆಲೆಯಲ್ಲಿ ಕಾರ್ತೀಕ ಮಾಸದ ಪ್ರತಿ ವಾರ ಎಣಿಕೆ ಕಾರ್ಯ ನಡೆಯಿತು.

ಹಣದ ಜೊತೆಯಲ್ಲಿ ಬೆಳ್ಳಿಯ ನಾಗರಸೆಡೆ, ತೊಟ್ಟಿಲು, ಕಣ್ಣು ಮತ್ತಿತರ ಆಕೃತಿಯ ವಸ್ತುಗಳನ್ನು ಕಾಣಿಕೆ ರೂಪದಲ್ಲಿ ಭಕ್ತರು ಹುಂಡಿಯಲ್ಲಿ ಹಾಕಿದ್ದರು.

ಕಾರ್ತೀಕ ಮಾಸದ 4 ವಾರಗಳಿಂದ ₹ 31,84,914 ಸಂಗ್ರಹವಾಗಿದ್ದು ಮುಜರಾಯಿ ಖಜಾನೆಗೆ ಅಧಿಕ ವರಮಾನ ನೀಡಿದೆ. ಒಟ್ಟು 22 ಹುಂಡಿಗಳನ್ನು ಕಂದಾಯ ಇಲಾಖೆಯವರು ಬೆಳಿಗ್ಗೆಯಿಂದ ಸಂಜೆಯವರೆಗೆ ಎಣಿಕೆ ಮಾಡಿದರು.

ಕಾಣಿಕೆ ಹಣವನ್ನು ಕೆ.ಆರ್.ಪೇಟೆಯ ಬ್ಯಾಂಕ್ ಆಫ್ ಬರೋಡಾದ ದೇಗುಲದ ಮುಜರಾಯಿ ಖಾತೆಗೆ ಜಮಾ ಮಾಡಲಾಯಿತು.

ಉಪತಹಶೀಲ್ದಾರ್ ವೀಣಾ, ಕಂದಾಯ ನಿರೀಕ್ಷಕ ಡಿ.ಆರ್.ನರೇಂದ್ರ, ಗ್ರಾಮ ಆಡಳಿತಾಧಿಕಾರಿ ಬಿ.ಎಂ. ಪ್ರಸನ್ನ, ಸೋಮಾಚಾರ್, ತಿಪ್ಪೇಶ್, ಸುನೀಲ್ ಗಾಣಿಗೇರ್, ಹರ್ಷಿತಾ, ವನಜಾಕ್ಷಿ, ಮುಜರಾಯಿ ಸಹಾಯಕಿ ಪೂರ್ಣಿಮಾ, ಗ್ರಾಮ ಸಹಾಯಕರು, ಬ್ಯಾಂಕ್ ಆಫ್ ಬರೋಡಾ ಸಿಬ್ಬಂದಿ, ಗ್ರಾಮದ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.