ಕಾಲೇಜು ಬಾಗಿಲು, ಕುರ್ಚಿಗೆ ಹಾನಿ

ಮದ್ದೂರು: ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದ ಕಾಂಪೌಂಡ್ ಹಾರಿ ತಡ ರಾತ್ರಿ ಪ್ರವೇಶಿಸಿರುವ ದುಷ್ಕರ್ಮಿಗಳು ಕಾಲೇಜಿನ ಕೊಠಡಿಗಳ ಬಾಗಿಲನ್ನು ಒಡೆದು, ಕಿಟಕಿ, ಕುರ್ಚಿಗಳಿಗೆ ಹಾನಿ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆ ಇದೇ ರೀತಿ ಕಿಡಿಗೇಡಿಗಳು ದಾಂದಲೆ ನಡೆಸಿದ್ದರು. ಕಾಲೇಜಿನ ಕಟ್ಟಡದ ಲ್ಲಿರುವ ವಿದ್ಯಾರ್ಥಿನಿಯರ ಶೌಚಾಲ ಯದ ಗೋಡೆಗಳಿಗೂ ಹಾನಿ ಮಾಡಿದ್ದಾರೆ. ಮೆಟ್ಟಿಲುಗಳ ಮೇಲೆ ಬಿಯರ್ ಬಾಟಲಿಗಳನ್ನು ಒಡೆದು ಹಾಕಿದ್ದಾರೆ.
‘ಕಳೆದ ತಿಂಗಳಲ್ಲೂ ಒಂದು ಬಾಗಿಲನ್ನು ಇದೇ ರೀತಿ ಮುರಿದು ಹಾಕಿದ್ದರು. ಆಗ ಕಾಲೇಜಿನ ಸಿಬ್ಬಂದಿ ಸೇರಿ ಸೇರಿ ಸರಿಪಡಿಸಿದ್ದೆವು. ಆದರೆ ಮತ್ತೆ ದುಷ್ಕರ್ಮಿಗಳು ಕಾಲೇಜು ಆವರಣಕ್ಕೆ ಬಂದು ಮದ್ಯಪಾನ ಮಾಡಿ ಹಾನಿ ಮಾಡಿದ್ದಾರೆ. ಇದೇ ರೀತಿ ಆದರೆ ಕಾಲೇಜಿಗೆ ವಿದ್ಯಾರ್ಥಿಗಳು ಬರುವುದಿಲ್ಲ. ಪೋಷಕರೂ ಭಯ ಪಡುತ್ತಾರೆ. ಪೊಲೀಸರು ಕೂಡಲೇ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರಾಂಶುಪಾಲ ಹನುಮಂತು ಒತ್ತಾಯಿಸಿದರು.
ಪ್ರಾಂಶುಪಾಲರು ನೀಡಿದ ದೂರಿನನ್ವಯ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.