ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಮುಂಬೈನಿಂದ ಬಂದ ಗರ್ಭಿಣಿ, ವಿದ್ಯಾರ್ಥಿನಿಗೆ ಕೋವಿಡ್‌

Last Updated 4 ಮೇ 2020, 12:20 IST
ಅಕ್ಷರ ಗಾತ್ರ

ಮಂಡ್ಯ: ಮುಂಬೈನಿಂದ ಕೆ.ಆರ್‌.ಪೇಟೆ ತಾಲ್ಲೂಕು ಜಾಗಿನಕೆರೆ ಗ್ರಾಮಕ್ಕೆ ಬಂದ ಗರ್ಭಿಣಿ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಥಿನಿಗೆ ಕೋವಿಡ್‌ ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.

20 ವರ್ಷದ ಮಹಿಳೆ 7 ತಿಂಗಳ ಗರ್ಭಿಣಿಯಾಗಿದ್ದು ಮುಂಬೈನ ಸಾಂತಾಕ್ರೂಸ್‌ನಲ್ಲಿ ವಾಸಿಸುತ್ತಿದ್ದರು. ಪತಿಯೊಂದಿಗೆ ಏ.23ರಂದು ಕಾರ್‌ನಲ್ಲಿ ಹೊರಟ ಅವರು ತಾಯಿ ಕಾರ್ಡ್‌ ತೋರಿಸಿ ಮಹಾರಾಷ್ಟ್ರ ಗಡಿ ದಾಟಿಸಿದ್ದರು. ಅವರ ಜೊತೆ ಬಂದ 19 ವರ್ಷದ ಯುವತಿ ಮುಂಬೈನ ತಿವಾರಿ ಎಂಜಿನಿಯರಿಂಗ್‌ ಕಾಲೇಜು ವಿದ್ಯಾರ್ಥಿನಿಯಾಗಿದ್ದು ಅವರಿಗೂ ಸೋಂಕು ಪತ್ತೆಯಾಗಿದೆ.

‘ಮುಂಬೈ ವಲಸಿಗರಿಗೆ ಆಂದೋಲನದ ರೀತಿಯಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಈ ವೇಳೆ ಇವರಿಗೆ ಕೋವಿಡ್‌ 19 ಇರುವುದು ಪತ್ತೆಯಾಗಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT