ಮಂಗಳವಾರ, ಅಕ್ಟೋಬರ್ 26, 2021
24 °C
ಶ್ರೀರಂಗಪಟ್ಟಣದಲ್ಲಿ ರಂಜಿಸಿದ ಜಿಲ್ಲೆಯ ಕಲಾವಿದರು; ಜನರಲ್ಲಿ ಸಂಭ್ರಮ

ದಸರಾ ಉತ್ಸವದಲ್ಲಿ ಸಾಂಸ್ಕೃತಿಕ ವೈಭವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ನಡೆಯು ತ್ತಿರುವ ದಸರಾ ಉತ್ಸವದಲ್ಲಿ ಜಿಲ್ಲೆಯ ವಿವಿಧೆಡೆಯ ಕಲಾವಿದರು ಭಾನುವಾರ ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯ ಕ್ರಮಗಳು ಮುದ ನೀಡಿದವು.

ಪಟ್ಟಣದ ಆರ್‌.ನಾಗರಾಜು, ರಾಮಯ್ಯ ಅವರ ತಂಡ ರಂಗ ಗೀತೆ ಹಾಡಿತು. ಹಾಡುಗಾರರು ಪೌರಾಣಿಕ ನಾಟಕಗಳ ಹಾಡುಗಳನ್ನು ಹಾಡಿ ರಂಜಿಸಿದರು. ಶಿವಲಿಂಗಾಚಾರ್‌ ದೇವರ ನಾಮ ಹಾಡಿದರು. ಕೊಡಿ
ಯಾಲದ ಸಂತೋಷ್‌ಕುಮಾರ್‌ ಸ್ಯಾಕ್ಸೋಫೋನ್‌ ನುಡಿಸಿದರು.

ಪಟ್ಟಣದ ವಿದ್ವಾನ್‌ ಪ್ರಸನ್ನ ಕುಮಾರ್‌ ಮತ್ತು ಪಿ.ವೆಂಕಟೇಶ್‌ ಅವರ ಸ್ಯಾಕ್ಸೋಫೋನ್‌ ಜುಗಲ್‌ ಬಂದಿ ಗಮನ ಸೆಳೆಯಿತು.

ಮೈಸೂರಿನ ಆರ್‌.ರಘು ಮತ್ತು ತಂಡದಿಂದ ಸುಗಮ ಸಂಗೀತ ನಡೆಯಿತು. ರೈತ ದಸರಾ ನಿಮಿತ್ತ ಕೃಷಿ ಮತ್ತು ರೇಷ್ಮೆ ಇಲಾಖೆಗಳಿಂದ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಎರಡೂ ಇಲಾಖೆಗಳಿಂದ ರೈತರಿಗೆ ಸಿಗುವ ಸರ್ಕಾರದ ಯೋಜನೆಗಳ ಬಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿ
ಮಾಹಿತಿ ನೀಡಿದರು.

ಭರತನಾಟ್ಯ, ಕೋಲಾಟಗಳ ಆಕರ್ಷಣೆ: ಭಾನುವಾರ ಭರತ ನಾಟ್ಯ, ಕೋಲಾಟ, ಜಾನಪದ ಗೀತೆಗಳ ಗಾಯನ ಪ್ರೇಕ್ಷಕರನ್ನು ಆಕರ್ಷಿಸಿದವು.

ಮೈಸೂರಿನ ವಿದುಷಿ ಪಂಕಜ ರಾಮ ಕೃಷ್ಣಯ್ಯ ಅವರ ತಂಡ ಭರತನಾಟ್ಯ ಪ್ರಸ್ತು ತಪಡಿಸಿತು. ದಾಸರ ಪದಗಳು ಇತರ ಕೀರ್ತನೆಗಳಿಗೆ ಪೂರಕವಾಗಿ ಈ ತಂಡದ ಕಲಾವಿದರು ಹೆಜ್ಜೆ ಹಾಕಿದರು. ಇದೇ ತಂಡದ ಕಲಾವಿದರು ಕೋಲಾಟವನ್ನೂ ಪ್ರದರ್ಶಿಸಿದರು. ಮೈಸೂರಿನ ಕ್ರಿಯಾ ಸಂಸ್ಥೆಯ ಕಲಾವಿ ದರು ಮೂಲ ಜಾನಪದ ಗೀತೆಗಳನ್ನು ಹಾಡಿದರು.

ಪಟ್ಟಣದ ಯೋಗಪಟಗಳು ವಿವಿಧ ಭಂಗಿಯಲ್ಲಿ ಯೋಗಾಸನ ಪ್ರದರ್ಶಿಸಿದರು. ಯುಎಸ್‌ಯ ಡ್ಯಾನ್ಸ್‌ ತಂಡದ ವಿನೂತನ ನೃತ್ಯಕ್ಕೆ
ಪ್ರೇಕ್ಷಕರು ಸಂಭ್ರಮಿಸಿದರು.

ಚಲನ ಚಿತ್ರಗಳ ‘ಜೋಕೆ ನಾನು ಬಳ್ಳಿಯ ಮಿಂಚು...’, ‘ಹುಬ್ಬಳ್ಳಿಯ ಶಹರದಾಗ....’ ‘ಕರುನಾಡೇ... ಸೇರಿದಂತೆ ವಿವಿಧ ಹಾಡುಗಳಿಗೆ ನೃತ್ಯ ಮಾಡಿದರು. ಕಲಾವಿದದ ವೇಷ, ಭೂಷಣ ಗಮನ ಸೆಳೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು