ಸಿಲಿಂಡರ್ ಸ್ಫೋಟ: ಮಹಿಳೆಯರಿಬ್ಬರಿಗೆ ತೀವ್ರ ಗಾಯ

7

ಸಿಲಿಂಡರ್ ಸ್ಫೋಟ: ಮಹಿಳೆಯರಿಬ್ಬರಿಗೆ ತೀವ್ರ ಗಾಯ

Published:
Updated:

ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಕಟ್ಟೆಕ್ಯಾತನಹಳ್ಳಿ ಗ್ರಾಮದಲ್ಲಿ ಬುಧವಾರ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಮನೆಯ ಚಾವಣಿ ಜಖಂಗೊಂಡು, ಅಡುಗೆ ಮಾಡುತ್ತಿದ್ದ ಇಬ್ಬರು ಮಹಿಳೆಯರು ತೀವ್ರವಾಗಿ ಗಾಯಗೊಂಡಿದ್ದಾರೆ.

ಗ್ರಾಮದ ಪಟೇಲ್ ನಂಜೇಗೌಡ ಅವರ ಮಗ ತಾತೇಗೌಡ ಎಂಬುವವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಶಶಿ (30), ಭಾನುಮತಿ (25) ಅವರಿಗೆ ಸುಟ್ಟ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಿತೃಪಕ್ಷದ ನಿಮಿತ್ತ ವಡೆ, ಚಕ್ಕುಲಿ ಸೇರಿ ವಿವಿಧ ತಿಂಡಿ ತಯಾರಿಸುತ್ತಿದ್ದ ಸಂದರ್ಭದಲ್ಲಿ ಸ್ಫೋಟ ಉಂಟಾಗಿದೆ.  ಸ್ಫೋಟದ ತೀವ್ರತೆಗೆ ಹೆಂಚಿನ ಚಾವಣಿ ಮುರಿದು ಬಿದ್ದಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !