ಸೂಳೆಕೆರೆ ನಿರ್ಮಾತೃ ತಾಯಿ ಕಾರ್ಯ ಶ್ರೇಷ್ಠ
‘ಮೈಸೂರು ಅರಸರಾದ ಕಂಠೀರವ ಒಡೆಯರ್ ಅವರ ಉಪಪತ್ನಿ ಬಂಗಾರದಿಡ್ಡಿಯವರು ಅರಸರಿಂದ ಪಡೆದ ಸಂಪನ್ಮೂಲವನ್ನು ತನ್ನ ಹೆಸರಿನಲ್ಲಿ ಬೆಳೆಗೆ ನೀರು ಹರಿಯುವ ನಾಲೆ ನಿರ್ಮಿಸಿ ಎಂಬ ವಿನಬ್ರ ಕೋರಿಕೆ ಹಿನ್ನೆಲೆಯಲ್ಲಿ ಕಂಠೀರವರ ಅರಸರು ಬಂಗಾರದಿಡ್ಡಿ ನಾಲೆ ನಿರ್ಮಿಸಿ ಆಕೆ ಹೆಸರನ್ನು ಚಿರಸ್ಥಾಯಿಯಾಗಿರಿಸಿರುವುದು ಈಗ ಇತಿಹಾಸದಲ್ಲಿದೆ. ಬಂಗಾರ ದಿಡ್ಡಿಯ ಕಾರ್ಯ ಎಷ್ಟು ಶ್ರೇಷ್ಠವೋ ಸೂಳೆಕೆರೆ ನಿರ್ಮಾತೃ ತಾಯಿ ಕಾರ್ಯ ಸಹ ಪರಮ ಶ್ರೇಷ್ಠ. ಆಕೆಯ ತ್ಯಾಗ ಬಲಿದಾನ ದೂರದೃಷ್ಟಿಗೆ ಹಾಗೂ ಸಮಾಜಮುಖಿ ಸ್ತ್ರೀ ಸಮುದಾಯಕ್ಕೆ ದ್ರೋಹ ಬಗೆದಂತಾಗುತ್ತದೆ. ಹಾಗಾಗಿ ತನ್ನದೆಯಾದ ಇತಿಹಾಸ ಹೊಂದಿರುವ ಸೂಳೆಕೆರೆ ಹೆಸರನ್ನು ಉಳಿಸಿಕೊಳ್ಳುವ ಮೂಲಕ ಆ ಮಾಹಾ ತ್ಯಾಗಿಯ ಕನಸನ್ನು ಜೀವಂತವಾಗಿ ಉಳಿಸುವುದು ನಮ್ಮನಿಮ್ಮೆಲ್ಲರ ಕಾರ್ಯವಾಗಿದೆ’ ಎಂದು ಡಿ.ಸಿ.ತಮ್ಮಣ್ಣ ಹೇಳಿದರು.