ಶ್ರೀರಂಗಪಟ್ಟಣ: ‘ದೇಸಿ ತಳಿಯ ಗೌರಿ ಸಣ್ಣ, ರಾಜಮುಡಿ, ಸಣ್ಣ ಸಿದ್ದ, ಜೀರಿಗೆ ಸಣ್ಣ ಇನ್ನಿತರ ದೇಸಿ ತಳಿಯ ಭತ್ತದ ಬೀಜಕ್ಕೆ ಭಾರಿ ಬೇಡಿಕೆ ಇದ್ದು ರೈತರು ಈ ತಳಿಗಳನ್ನು ಬೆಳೆದು ಮಾರಾಟ ಮಾಡಿ ಲಾಭ ಕಂಡುಕೊಳ್ಳಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್. ಅಶೋಕ್ ಸಲಹೆ ನೀಡಿದರು.

ಪಟ್ಟಣದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ‘ದೇಸಿ ತಳಿ ಬಿತ್ತನೆ ಬೀಜ ಸಂರಕ್ಷಣೆ– ಜಿಲ್ಲಾ ಮಟ್ಟದ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.

‘ದೇಸಿ ತಳಿಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ ಬೆಲೆ ಹೆಚ್ಚಾದರೂ ಬೇಡಿಕೆ ಇದೆ. ರೈತರು ದೇಸಿ ತಳಿಯ ಭತ್ತದ ಬಿತ್ತನೆ ಬೀಜ ಉತ್ಪಾದನೆಯತ್ತ ಮುಖ ಮಾಡಬೇಕು. ಒಂದು ಕ್ಲಸ್ಟರ್ನಲ್ಲಿ 5ರಿಂದ 6 ಎಕರೆ ವಿಸ್ತೀರ್ಣದಲ್ಲಿ ದೇಸಿ ತಳಿಯ ಭತ್ತ ಬೆಳೆದರೂ ಸಾಕು. ಸಾವಯವ ಪದ್ಧತಿಯಲ್ಲಿ ಬೆಳೆದ 300 ಟನ್ ಭತ್ತವನ್ನು ರೈತ ಉತ್ಪಾದಕ ಕಂಪನಿಯಿಂದ ಖರೀದಿಸಲಾಗಿದೆ’ ಎಂದರು.

‘ಭತ್ತ ಕಟಾವು ಯಂತ್ರ ಖರೀದಿಸುವ ರೈತರಿಗೆ ₹11 ಲಕ್ಷದ ವರೆಗೆ ಸರ್ಕಾರ ಸಬ್ಸಿಡಿ ನೀಡುತ್ತಿದೆ. ಶೇ 6ರಷ್ಟು ಬ್ಯಾಂಕ್ ಸಾಲ ಕೂಡ ಸಿಗುತ್ತಿದ್ದು, ಪ್ರಯೋಜನ ಪಡೆದುಕೊಳ್ಳಬೇಕು. ತಾಲ್ಲೂಕು ಕೇಂದ್ರದಲ್ಲಿ ₹2 ಕೋಟಿ ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರದ ಕಟ್ಟಡ ನಿರ್ಮಾಣ ಕಾರ್ಯ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ’ ಎಂದು ತಿಳಿಸಿದರು.

ತಳಿ ವಿಜ್ಞಾನ ಪ್ರೊ. ದೀಪಕ್ ಮಾತನಾಡಿ, ‘ಪ್ರಪಂಚದಲ್ಲಿ 1 ಲಕ್ಷ 35 ಸಾವಿರ ಭತ್ತದ ತಳಿಗಳಿವೆ. ಈ ಪೈಕಿ ಭಾರತದಲ್ಲಿ 16 ಸಾವಿರ ತಳಿಗಳಿದ್ದು, ಮಂಡ್ಯ ಕೃಷಿ ವಿಶ್ವವಿದ್ಯಾನಿಲಯದಲ್ಲಿ 11 ಸಾವಿರ ತಳಿಗಳನ್ನು ಸಂರಕ್ಷಿಸಲಾಗಿದೆ. ದೇಸಿ ತಳಿಗಳ ಅಕ್ಕಿ ರಫ್ತು ಮಾಡಲು ಸರ್ಕಾರ ಮುಂದಾಗಿದ್ದು ಬೆಳೆಗಾರರಿಗೆ ಹೆಚ್ಚಿನ ಅನುಕೂಲ ಆಗಲಿದೆ’ ಎಂದರು.

ಕೃಷಿ ಇಲಾಖೆ ಉಪ ನಿರ್ದೇಶಕ ಭಾನುಪ್ರಕಾಶ್ ಮಾತನಾಡಿ, ‘ಕೇಂದ್ರ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ರೈತರು ಎಫ್ಐಡಿ ಮಾಡಿಸಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ಪಹಣಿಗಳಿಗೆ ಆಧಾರ್ ಸಂಖ್ಯೆ ಜೋಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಸಣ್ಣ, ಅತಿ ಸಣ್ಣ ಮಾತ್ರವಲ್ಲದೆ ದೊಡ್ಡ ರೈತರು ಕೂಡ ಎಫ್ಐಡಿ ಮಾಡಿಸಬಹುದು’ ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ, ಕೃಷಿ ಅಧಿಕಾರಿಗಳಾದ ರಾಮೇಗೌಡ, ಗೀತಾ, ಶಿಲ್ಪಾ, ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಕಡತನಾಳು ಬಾಲಕೃಷ್ಣ, ಖಜಾಂಚಿ ನಾಗರಾಜು, ಸದಸ್ಯರಾದ ಟಿ.ಕೆ. ಯತೀಶ್, ಯೋಗಾನರಸಿಂಹ ಹಾಗೂ ವಿವಿಧ ತಾಲ್ಲೂಕುಗಳ ಪ್ರಗತಿಪರ ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.