ಶುಕ್ರವಾರ, ಏಪ್ರಿಲ್ 23, 2021
29 °C

ಮಾಸಾಶನ ಬಿಡುಗಡೆಗೆ ಕುಸ್ತಿಪಟುಗಳ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ಕುಸ್ತಿಪಟುಗಳಿಗೆ ಎಂಟು ತಿಂಗಳಿಂದ ಮಾಸಾಶನ ಬಾರದೆ ಆಸ್ಪತ್ರೆ ಇತರ ಖರ್ಚು ನಿಬಾಯಿಸುವುದು ಕಷ್ಟವಾಗಿದ್ದು, ತಕ್ಷಣ ಮಾಸಾಶನ ಬಿಡು ಗಡೆ ಮಾಡಬೇಕು ಎಂದು ತಾಲ್ಲೂಕಿನ ಹಿರಿಯ ಕುಸ್ತಿಪಟುಗಳು ಆಗ್ರಹಿಸಿದರು.

ಪಟ್ಟಣದಲ್ಲಿ ಮಂಗಳವಾರ ಸಭೆ ನಡೆಸಿದ ಕುಸ್ತಿಪಟುಗಳಾದ ಕುಬೇರ್‌ಸಿಂಗ್‌, ಶ್ರೀಕಂಠು, ಗಂಜಾಂ ಜಯರಾಂ, ಗೋವಿಂದರಾಜು, ಶಂಕರ್‌, ಕೆ.ಶೆಟ್ಟಹಳ್ಳಿ ಮಹಲಿಂಗು, ಪಾಲಹಳ್ಳಿ ಉಮೇಶ್‌, ಮಹದೇವಪುರದ ವೆಂಕಟರಾಮ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಯುವ ಸಬಲೀಕರಣ ಇಲಾಖೆ, 50 ವರ್ಷ ದಾಟಿದ ಕುಸ್ತಿಪಟುಗಳಿಗೆ ಮಾಸಿಕ ₹ 2,500 ಮಾಸಾಶನ ನೀಡುತ್ತಿತ್ತು. ಆದರೆ ಎಂಟು ತಿಂಗಳುಗಳಿಂದ ಬಿಡಿಗಾಸನ್ನೂ ನೀಡಿಲ್ಲ. ಗ್ರಾಮೀಣ ಪ್ರದೇಶದ ಕುಸ್ತಿಪಟುಗಳು ಇದನ್ನೇ ನೆಚ್ಚಿಕೊಂಡಿದ್ದಾರೆ. ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಜಿಲ್ಲಾ ಪಂಚಾಯಿತಿ ಕಡೆ ಬೊಟ್ಟು ಮಾಡುತ್ತಾರೆ. ಹೀಗೆ ಸಬೂಬು ಹೇಳದೆ ಶೀಘ್ರ ಮಾಸಾಶನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಇಲಾಖೆಯ ಕಚೇರಿ ಎದುರು ಧರಣಿ ಕೂರುತ್ತೇವೆ ಎಂದು ಕುಸ್ತಿಪಟುಗಳು ಎಚ್ಚರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು