ಕಿಕ್ಕೇರಿ: ಆದಿಗುರು ಶಂಕರರ ಹಿಂದೂ ಧರ್ಮದ ಉಳಿವಿನ ಗಟ್ಟಿಬೇರು ಜಗತ್ತು ಇರುವವರಿಗೆ ಶಾಶ್ವತವಾಗಿ ಇರಲಿದೆ ಎಂದು ವೇದ ಬ್ರಹ್ಮಶ್ರೀ ಅನಿಲ್ಶಾಸ್ತ್ರೀ ಹೇಳಿದರು.

ಪಟ್ಟಣದ ವಿಪ್ರ ಬಾಂಧವ ಸಮಿತಿ ಸುಬ್ಬರಾಯ ಛತ್ರದಲ್ಲಿ ಶನಿವಾರ ಆಯೋಜಿಸಿದ್ದ ಶಂಕರಚಾರ್ಯರ ಆರಾಧನೆ ಹಾಗೂ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಹಿಂದೂ ಧರ್ಮ ಅನ್ಯಧರ್ಮಗಳಿಂದ 8ನೇ ಶತಮಾನದಲ್ಲಿ ನಾಶವಾಗುವ ಹಂತದಲ್ಲಿದ್ದಾಗ ದೇವಮಾನವರಾಗಿ ದೇಶ ಪರ್ಯಟನೆ ನಡೆಸಿ ಧರ್ಮ ಜಾಗೃತಿ ಮೂಡಿಸಿದರು. ದೇಶದ ನಾಲ್ಕು ದಿಕ್ಕಿನಲ್ಲಿ ಶಕ್ತಿಪೀಠಗಳನ್ನು ಸ್ಥಾಪಿಸಿ ಹಿಂದೂ ಧರ್ಮ ಉಳಿವಿಗೆ ಶಕ್ತಿ ತುಂಬಿದರು’ ಎಂದರು.

‘ಬದುಕಿದ್ದು 32 ವರ್ಷವಾದರೂ ತಮ್ಮ 8ನೇ ವಯಸ್ಸಿನಲ್ಲಿಯೇ ವೇದಗಳನ್ನೂ, 12ನೇ ವಯಸ್ಸಿನಲ್ಲಿ ಶಾಸ್ತ್ರಗಳನ್ನು, 16ರಲ್ಲಿ ಎಲ್ಲವುದ್ದಕ್ಕೂ ಭಾಷ್ಯವನ್ನು ರಚಿಸಿದ ಜ್ಞಾನಿಯಾಗಿ ಮೂರು ಬಾರಿ ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡಿ ಸನಾತನ ಧರ್ಮ ಗಟ್ಟಿಗೊಳಿಸಿದರು. ಆಚಾರ್ಯರು ರಚಿಸಿದ ಉಪನಿಷತ್, ಭಾಷ್ಯ ಭಜಗೋವಿಂದಂ, ಸೌಂದರ್ಯಲಹರಿ ಸ್ತ್ರೋತ್ರಗಳು ಜಗತ್ಪ್ರಸಿದ್ಧವಾಗಿದೆ’ ಎಂದರು.

ಆರಾಧನೆ, ಶಂಕರ ಸಪ್ತಾಹ ಅಂಗವಾಗಿ ಪುಷ್ಪಾರ್ಚನೆ, ತುಳಸಿ ಅರ್ಚನೆ, ರುದ್ರಾಭಿಷೇಕ, ಮತ್ತಿತರ ಪೂಜಾ ಕೈಂಕರ್ಯಗಳು ನಡೆದವು. ಶಂಕರರ ಭಾವಚಿತ್ರಕ್ಕೆ ವಿವಿಧ ಪರಿಮಳ ಪುಷ್ಪಗಳ ಮಾಲೆಯನ್ನು ಹಾಕಿ ಶೃಂಗರಿಸಲಾಗಿತ್ತು. ಶಂಕರರ ಪಾದುಕಾ ಪೂಜೆ ವಿಜೃಂಭಣೆಯಿಂದ ನೆರವೇರಿತು. ಕೀರ್ತನೆ, ಭಜನೆ, ಶಂಕರ ವಿಜಯ ಪಾರಾಯಣ, ಮಹಾಮಂಗಳಾರತಿ, ತೀರ್ಥ ಪ್ರಸಾದ, ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು.

ಕೆ.ಬಿ. ವೆಂಕಟೇಶ್, ಕೆ.ಎಸ್. ಅನಂತಸ್ವಾಮಿ, ನರಸಿಂಹ, ಮಹಾಬಲಶರ್ಮ, ಮಹಾಬಲರಾವ್, ಕೆ.ಎಸ್. ಪರಮೇಶ್ವರಯ್ಯ, ಕೆ.ಎಸ್. ನಂಜುಂಡಸ್ವಾಮಿ, ಕೆ.ಎಸ್. ಸತ್ಯನಾರಾಯಣ, ಕೆ.ಎಸ್. ಶಂಕರನಾರಾಯಣ, ಕೆ.ಎಸ್. ಪ್ರಭಾಕರ್, ಗಣೇಶರಾವ್, ಸೀತಾರಾಂ, ನಾಗೇಂದ್ರ, ರಾಮಣ್ಣ ಮಾಸ್ಟರ್, ಗಣೇಶರಾವ್, ಜಯಮ್ಮ, ಗಿರಿಜಮ್ಮ, ಸುಮಾ, ನಂದಿನಿ, ವೇದಾವತಿ, ಸರಸ್ವತಿ, ಸ್ವರ್ಣ, ಮೇಘಶ್ರೀ, ಭಾಗ್ಯಮ್ಮ, ವೇದಾವತಿ, ಕಲಾವತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.