ಗುರುವಾರ , ನವೆಂಬರ್ 21, 2019
26 °C

ವರ್ಗಾವಣೆ ಖಂಡಿಸಿ ವೈದ್ಯೆ ಏಕಾಂಗಿ ಪ್ರತಿಭಟನೆ

Published:
Updated:
Prajavani

ಮದ್ದೂರು: ವರ್ಗಾವಣೆ ಆದೇಶ ಖಂಡಿಸಿ ಮದ್ದೂರಿನ ಸರ್ಕಾರಿ ಆಸ್ಪತ್ರೆಯ ವೈದ್ಯೆಯೊಬ್ಬರು ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದಾರೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಾ.ಶಶಿಕಲಾ ಮಾತನಾಡಿ, ‘ಜಿಲ್ಲಾ ವೈದ್ಯಾಧಿಕಾರಿ ಮಂಚೇಗೌಡ ಅವರು ರಾಜಕೀಯ ಒತ್ತಡಕ್ಕೆ ಮಣಿದು ದುರುದ್ದೇಶಪೂರಕವಾಗಿ ಬೆಂಗಳೂರಿನ ವೈದ್ಯಕೀಯ ನಿರ್ದೇಶನಾಲಯಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶಿಸಿ ವರ್ಗಾವಣೆ ಮಾಡಿದ್ದು ಖಂಡನೀಯ. ಇಲ್ಲಿನ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ಡಾ.ಶಿವಸ್ವಾಮಿ ಅವರು ವಿನಾಕಾರಣ ತಮ್ಮ ಮೇಲೆ ದಲಿತ ಮಹಿಳೆ ಎನ್ನುವ ಕಾರಣಕ್ಕೆ ಜಾತಿ ನಿಂದನೆ ಮಾಡಿ, ಮಾನಸಿಕವಾಗಿ ಹಿಂಸೆ ನೀಡಿರುವುದಾಗಿ ಆರೋಪಿಸಿದ ಅವರು, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು‘ ಎಂದು ಆಗ್ರಹಿಸಿದ್ದಾರೆ.

‘ತಮಗೆ ಬುದ್ಧಿಮಾಂದ್ಯ ಮಗನಿದ್ದು, ಮಂಡ್ಯದಿಂದ ಈಗ ಬೆಂಗಳೂರಿಗೆ ವರ್ಗಾವಣೆ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮಂಡ್ಯದಿಂದ ಬೆಂಗಳೂರಿಗೆ ಹೋಗಿ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಮದ್ದೂರಿನಲ್ಲಿಯೇ ಸೇವೆ ಮುಂದುವರಿಸಲು ಅವಕಾಶ ಮಾಡಿಕೊಡಬೇಕು‘ ಎಂದು ಅವರು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)