ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌದಳ್ಳಿ: 7 ಮಂದಿ ಮೇಲೆ ಬೀದಿನಾಯಿ ದಾಳಿ

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಜನರ ಪರದಾಟ
Last Updated 28 ಮೇ 2021, 3:41 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಕೌದಳ್ಳಿ ಗ್ರಾಮದಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರಿದ್ದು, ಗುರುವಾರ ಮಕ್ಕಳು ಸೇರಿ 7 ಮಂದಿಗೆಕಚ್ಚಿವೆ.

ಗ್ರಾಮದ ಪರಿಶಿಷ್ಟ ಪಂಗಡದ ಕಾಲೊನಿಯಲ್ಲಿ ಮೂವರು ಹಾಗೂ ಮುಸ್ಲಿಂ ಬಡಾವಣೆಯಲ್ಲಿ ನಾಲ್ಕು ಜನರ ಮೇಲೆ ದಾಳಿ ಮಾಡಿವೆ.

ಒಂದೇ ದಿನ 7 ಮಂದಿಯ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದರೂ ಸಂಬಂಧಿಸಿದ ಪಂಚಾಯಿತಿ ಅಧಿಕಾರಿಗಳು ಬಡಾವಣೆಗೆ ಭೇಟಿ ನೀಡಿಲ್ಲ ಎಂದು ಗಾಯಗೊಂಡವರು ದೂರಿದ್ದಾರೆ.

ಬಡಾವಣೆಯಲ್ಲಿ ಒಂದು ವಾರದಿಂದ ಬೀದಿನಾಯಿಗಳ ಹಿಂಡು ಅಡ್ಡಾಡುತ್ತಿವೆ. ಗುರುವಾರ ಬೆಳಿಗ್ಗೆ ಅಂಗಡಿಗೆ ಹೋಗುವಾಗ ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಸಿಗದೆ ಖಾಸಗಿ ಆಸ್ಪತ್ರೆಯಲ್ಲಿ ₹ 350 ನೀಡಿ ಚುಚ್ಚುಮದ್ದು ಹಾಕಿಸಿಕೊಂಡಿದ್ದೇನೆ. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ರಸ್ತೆಯಲ್ಲಿ ಹೋಗುವುದೇ ಕಷ್ಟವಾಗಿದೆ. ಈ ಬಗ್ಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಗೊತ್ತಿದ್ದರೂ ಜಾಣಮೌನ ವಹಿಸಿದ್ದಾರೆ ಎಂದು ನಾಯಿ ಕಡಿತಕ್ಕೊಳಗಾದ ಅಜರ್ ಪಾಷಾ ದೂರಿದರು.

ಗ್ರಾಮದಲ್ಲಿ ಅನೈರ್ಮಲ್ಯ ವಾತಾವರ ಣವಿದೆ. ಜನರರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ
ಬಗ್ಗೆ ಕ್ರಮವಹಿಸುವಂತೆ ಪಿಡಿಒಗೆ
ಮನವಿ ಸಲ್ಲಿಸಿದ್ದೆವು. ಆದರೆ ಕ್ರಮ ಕೈಗೊಳ್ಳದೆ ಇರುವುದರಿಂದ ನಾಯಿಗಳು ದಾಳಿ ಮಾಡಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಗ್ರಾಮದ ನೂರುಲ್ಲಾ ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಕೌದಳ್ಳಿ ಗ್ರಾಮಪಂಚಾಯಿತಿ ಪಿಡಿಒ ಮರಿಸ್ವಾಮಿ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT