ಮಂಡ್ಯ: ಶ್ರೀಮತಿ ಪದ್ಮಾ ಜಿ.ಮಾದೇಗೌಡ ಪ್ರತಿಷ್ಠಾನವು ಅವರ ಹೆಸರಿನಲ್ಲೇ ನೀಡುವ ರಾಜ್ಯಮಟ್ಟದ ಮಹಿಳಾ ಸೇವಾ ಪ್ರಶಸ್ತಿಗೆ ಕಲಬುರ್ಗಿಯ ಕ್ಯಾನ್ಸರ್ ತಜ್ಞೆ ಡಾ.ವಿಜಯಲಕ್ಷ್ಮಿ ದೇಶಮಾನೆ ಆಯ್ಕೆಯಾಗಿದ್ದಾರೆ.

12 ವರ್ಷದಿಂದ ಸಾಧಕಿಯರನ್ನು ಗುರುತಿಸುತ್ತಿದ್ದು, ಪ್ರಶಸ್ತಿಯು ₹25 ಸಾವಿರ ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಂ.ನಂಜೇಗೌಡ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಾರ್ಚ್ 24ರಂದು ಭಾರತೀನಗರದ ಭಾರತೀ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ ಪ್ರಶಸ್ತಿ ಪ್ರದಾನ ಮಾಡುವರು. ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಪದ್ಮಾ ಜಿ.ಮಾದೇಗೌಡ, ಬಿಇಟಿ ಸಿಇಒ ಜಿ.ಎಂ.ಆಶಯ್ ಭಾಗವಹಿಸುವರು ಎಂದು ಹೇಳಿದರು.

ಪ್ರಾಂಶುಪಾಲರಾದ ಜಿ.ಬಿ.ಪಲ್ಲವಿ, ಪ್ರತಿಷ್ಠಾನದ ಮಹಿಳಾ ಕೋಶದ ಸಹ ಸಂಚಾಲಕಿ ಎಚ್.ಡಿ.ಪ್ರತಿಮಾ, ಸದಸ್ಯರಾದ ಕುಮುದಾ ಮಯೂರ್, ಎಸ್.ಗೀತಾ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.