ಶುಕ್ರವಾರ, ಫೆಬ್ರವರಿ 26, 2021
31 °C

ಗೌರಿಪುರದಲ್ಲಿ ಕುಡಿಯುವ ನೀರಿಗೆ ತತ್ವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಗೌರಿಪುರ ಗ್ರಾಮಕ್ಕೆ ಗರುಡನಉಕ್ಕಡ ಗ್ರಾಮದಿಂದ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಪದೇ ಪದೆ ಒಡೆಯುತ್ತಿದ್ದು, ಕುಡಿಯುವ ನೀರಿಗೆ ತತ್ವಾರವಾಗಿದೆ.

ಗರುಡನಉಕ್ಕಡ ಮತ್ತು ಗೌರಿಪುರ ಗ್ರಾಮಗಳ ಮಧ್ಯೆ ಬೆಂಗಳೂರು– ಮೈಸೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಜೆಸಿಬಿ ಬಳಕೆ, ವಾಹನಗಳ ಓಡಾಟದಿಂದ ವಾರದಲ್ಲಿ ಮೂರು ದಿನ ನೀರಿನ ಕೊಳವೆ ಒಡೆಯುತ್ತಿದೆ. ಎರಡು ವಾರಗಳಿಂದ ಮೇಲಿಂದ ಮೇಲೆ ಈ ಸಮಸ್ಯೆ ಉಂಟಾಗುತ್ತಿದೆ. ಹೆದ್ದಾರಿ ಕಾಮಗಾರಿಯ ಉಪ ಗುತ್ತಿಗೆ ಪಡೆದಿರುವವರು ಕುಡಿಯುವ ನೀರಿನ ಕೊಳವೆ ಒಡೆದರೂ ತತ್ಸಾರದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ, ಪಿಡಿಒ ಆರ್‌. ಶಿಲ್ಪಾ ಇತರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಗೌರಿಪುರ ಗ್ರಾಮದಲ್ಲಿ 500ಕ್ಕೂ ಹೆಚ್ಚು ಜನರಿದ್ದು, ಒಂದು ಬಿಂದಿಗೆ ನೀರಿಗೂ ಬವಣೆಪಡುತ್ತಿದ್ದೇವೆ. ಹೆದ್ದಾರಿ ಕಾಮಗಾರಿ ಗುತ್ತಿಗೆದಾರರ ಬೇಜವಾ ಬ್ದಾರಿಯಿಂದ ತೊಂದರೆಯಾಗಿದೆ. ಅಧಿಕಾರಿಗಳು ಕೂಡ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು. ಇಲ್ಲದಿದ್ದರೆ ತಾ.ಪಂ. ಕಚೇರಿ ಎದುರು ಖಾಲಿ ಬಿಂದಿಗೆಗಳ ಜತೆ ಧರಣಿ ಕೂರುತ್ತೇವೆ ಎಂದು ಗ್ರಾಮದ ಪ್ರಸಾದ್‌ ಇತರರು ಎಚ್ಚರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು