ಶ್ರೀರಂಗಪಟ್ಟಣ: ಕುಶಾಲನಗರದ ಬಳಿಯ ದುಬಾರೆ ನವ್ಯಧಾಮದಲ್ಲಿ ತಮಿಳುನಾಡು ಮೂಲದ ಮಹಿಳೆ ಮತ್ತು ಸಾಕಾನೆ ಮಾರ್ತಾಂಡ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ರೋಟರಿ ಸಂಸ್ಥೆ ವತಿಯಿಂದ ಮಂಗಳವಾರ ಸಂಜು ಮೊಂಬತ್ತಿ ಮೆರವಣಿಗೆ ನಡೆಸಿ ಸಂತಾಪ ಸೂಚಿಸಲಾಯಿತು.

ಪಟ್ಟಣದ ಪುರಸಭೆ ಕಚೇರಿ ವೃತ್ತದಿಂದ ಕುವೆಂಪು ವೃತ್ತದ ವರೆಗೆ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಮೊಂಬತ್ತಿ ಹಿಡಿದು ಹೆಜ್ಜೆ ಹಾಕಿದರು. ‘ಮಾರ್ತಾಂಡ ಚಿರಾಯುವಾಗಲಿ...’ ಎಂದು ಘೋಷಣೆ ಕೂಗಿದರು.

ಹಿರಿಯ ವೈದ್ಯ ಹಾಗೂ ಗಾಂಧಿವಾದಿ ಡಾ.ಬಿ. ಸುಜಯಕುಮಾರ್ ಮಾತನಾಡಿ, ‘ಮಾನವನ ಅತಿರೇಕಗಳಿಂದ ಅವಘಡಗಳು ಸಂಭವಿಸುತ್ತಿವೆ. ಪ್ರಕೃತಿ ನಿಯಮಕ್ಕೆ ವಿರುದ್ಧವಾಗಿ ಯಾರೂ ನಡೆದುಕೊಳ್ಳಬಾರದು. ಸ್ವೇಚ್ಛಾಚಾರ ತೋರಬಾರದು. ವನ್ಯಜೀವಿಗಳ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ಎಚ್ಚರ ವಹಿಸಬೇಕು. ಇಲ್ಲದಿದ್ದರೆ ದುಬಾರೆಯಲ್ಲಿ ನಡೆದಂತಹ ಅವಘಡಗಳು ಮರುಕಳಿಸುತ್ತವೆ’ ಎಂದು ಎಚ್ಚರಿಸಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಆರ್. ರಾಘವೇಂದ್ರ ಮಾತನಾಡಿ, ‘ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ ಮಾರ್ತಾಂಡ ಆನೆಯ ಸಾವಿನಿಂದ ಸೂತಕದ ಛಾಯೆ ಆವರಿಸಿದೆ. ವನ್ಯಧಾಮಕ್ಕೆ ಭೇಟಿ ನೀಡುವವರು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.

ಟೌನ್ ಪೊಲಿಸ್ ಠಾಣೆ ಮಹಿಳಾ ಪಿಎಸ್ಐ ಜನಾಬಾಯಿ ಕಡಪಟ್ಟಿ, ಐಕ್ಯ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ಎನ್. ಸರಸ್ವತಿ, ಸತೀಶ್, ಅರುಣ್, ಸವಿತಾ, ಜ್ಞಾನಾನಂದ, ರಮೇಶ್, ಹೃದಯ್, ಕರ್ಣ, ಶ್ರೇಯಸ್, ನಿಶಾ, ಚಿರಾಗ್, ವಿಹಾನ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-40-2035351290

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.