ಗುರುವಾರ , ನವೆಂಬರ್ 21, 2019
26 °C

ಮಂಡ್ಯ: ತಿಂಗಳಿಡೀ ವಿದ್ಯುತ್‌ ವ್ಯತ್ಯಯ

Published:
Updated:

ಮಂಡ್ಯ: ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ದಶಪಥ ಕಾಮಗಾರಿಯು ಪ್ರಗತಿಯಲ್ಲಿದ್ದು, ಅಕ್ಕಪಕ್ಕದ ಬಡಾವಣೆಗಳಿಗೆ ಒಂದು ತಿಂಗಳವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ.‌

ಹೆದ್ದಾರಿಯ ಅಕ್ಕಪಕ್ಕದ ವಿದ್ಯುತ್‌ ಕಂಬಗಳ ಮಾರ್ಗ ಬದಲಾವಣೆ, ಪರಿವರ್ತಕಗಳನ್ನು ಸ್ಥಳಾಂತರಿಸಲಾಗುತ್ತಿದೆ. ಹೀಗಾಗಿ ಇಂಡುವಾಳು, ಮಾಯಣ್ಣನ ಕೊಪ್ಪಲು, ಉರಮಾರಕಸಲಗೆರೆ, ಎಲೆಚಾಕನಹಳ್ಳಿ, ರಾಗಿಮುದ್ದನ ಹಳ್ಳಿ, ಸುಂಡಹಳ್ಳಿ, ಯಲಿಯೂರು, ಕಾಳೇನಹಳ್ಳಿ, ತೂಬಿನಕೆರೆ ಹಾಗೂ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿ ತಿಂಗಳಿಡೀ ವಿದ್ಯುತ್‍ ಪೂರೈಕೆಯಲ್ಲಿ ಅಡಚಣೆಯಾಗಲಿದೆ.

ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸೆಸ್ಕ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರತಿಕ್ರಿಯಿಸಿ (+)