ಶ್ರೀರಂಗಪಟ್ಟಣ: ತಾಲ್ಲೂಕಿನ ದೇವರಗುಡ್ಡನಕೊಪ್ಪಲು ಬಳಿ ಶನಿವಾರ ಬೆಳಿಗ್ಗೆ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿವೆ.
ಗ್ರಾಮದ ಹೊರ ವಲಯದ ಕಬ್ಬಿನ ಗದ್ದೆಯಲ್ಲಿ ಇವು ಬೀಡು ಬಿಟ್ಟಿವೆ. ಭಾರತಿನಗರ ಕಡೆಯಿಂದ ಆನೆಗಳು ಇತ್ತ ಬಂದಿವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ನಾಲ್ಕೈದು ತಿಂಗಳ ಹಿಂದೆ ಇಲ್ಲಿಗೆ ಸಮೀಪದ ಲಾಳನಕೆರೆ ಬಳಿ ಕಾಡಾನೆಯೊಂದು ಕೃಷಿ ಕಾರ್ಮಿಕ ಮಹಿಳೆಯ ಮೇಲೆ ದಾಳಿ ನಡೆಸಿ ಸಾಯಿಸಿತ್ತು. ಹಾಗಾಗಿ ಮತ್ತೆ ಕಾಡಾನೆಗಳು ಇತ್ತ ಬಂದಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಅರಕೆರೆ ಠಾಣೆ ಪೊಲೀಸರು ಬೀಡು ಬಿಟ್ಟಿದ್ದು ಆನೆಗಳನ್ನು ಮರಳಿ ಕಾಡಿಗಟ್ಟುವ ಪ್ರಯತ್ನ ನಡೆಸಿದ್ದಾರೆ.