ರೇಷ್ಮೆ ಸಾಕಾಣಿಕೆ ಮತ್ತು ಕೃಷಿ ಚಟುವಟಿಕೆ ಮಾಡಿಕೊಂಡಿದ್ದ ಸಿದ್ದೇಗೌಡ ಅವರು, ಕೊಳವೆಬಾವಿ ಕೊರೆಸಲು ಸ್ಥಳೀಯರಿಂದ ₹3 ಲಕ್ಷ ಕೈಸಾಲ ಮತ್ತು ದಳವಾಯಿ ಕೋಡಿಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹75 ಸಾವಿರ ಬೆಳೆ ಸಾಲ ಪಡೆದಿದ್ದರು. ಬಹಳ ದಿನಗಳಿಂದ ಸಾಲ ತೀರಿಸಲಾಗದೇ ಬೇಸರದಿಂದ ಸೆ.26 ರಂದು ತಡರಾತ್ರಿ ವಿಷ ಸೇವಿಸಿದ್ದರು. ಅಸ್ವಸ್ಥರಾದ ಸಿದ್ದೇಗೌಡ ಅವರನ್ನು ಮನೆಯವರು ಶುಕ್ರವಾರ ಬೆಳಿಗ್ಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಸೋಮವಾರ (ಸೆ.30) ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.