ರೈತರ ಬಾಕಿಹಣ ಪಾವತಿಗೆ ಒತ್ತಾಯ:18ಕ್ಕೆ ಕಬ್ಬು ಬೆಳೆಗಾರರಿಂದ ವಿಧಾನಸೌಧ ಮುತ್ತಿಗೆ

7

ರೈತರ ಬಾಕಿಹಣ ಪಾವತಿಗೆ ಒತ್ತಾಯ:18ಕ್ಕೆ ಕಬ್ಬು ಬೆಳೆಗಾರರಿಂದ ವಿಧಾನಸೌಧ ಮುತ್ತಿಗೆ

Published:
Updated:

ಮಂಡ್ಯ: ‘ರಾಜ್ಯದಾದ್ಯಂತ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೊಡಬೇಕಾದ ಬಾಕಿ ಹಣ ಪಾವತಿ ಮಾಡುವಂತೆ ಒತ್ತಾಯಿಸಿ ಸೆ.18ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ರಾಜ್ಯ ಘಟಕದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಹೇಳಿದರು.

‘2017–18ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ₹ 500 ಕೋಟಿಗೂ ಹೆಚ್ಚು ಹಣ ಕೊಡಬೇಕು. ರಾಜ್ಯ ಬೆಂಬಲ ಬೆಲೆ (ಎಸ್‌ಎಪಿ) ನೀಡುವಲ್ಲಿ ಸರ್ಕಾರವೂ ನಿರ್ಲಕ್ಷ್ಯ ವಹಿಸಿದೆ. ಭಾರತೀನಗರದ ಚಾಂಷುಗರ್‌ ಕಾರ್ಖಾನೆ ₹ 10 ಕೋಟಿ ಬಾಕಿ ಉಳಿಸಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಪ್ಯಾರಿ ಸಕ್ಕರೆ ಕಾರ್ಖಾನೆ ಕೊಡಬೇಕಾದ ಬಾಕಿ ಹಣಕ್ಕಾಗಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಾಕಿ ಕೊಡದ ಸಕ್ಕರೆ ಕಾರ್ಖಾನೆಯಲ್ಲಿರುವ ಸಕ್ಕರೆ ಮುಟ್ಟುಗೋಲು ಹಾಕಿಕೊಂಡು, ಮಾರಾಟ ಮಾಡಿ ರೈತರ ಬಾಕಿ ಹಣ ಪಾವತಿಸಬೇಕು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ರಾಷ್ಟ್ರೀಕೃತ ಬ್ಯಾಂಕ್‌ಗಳ ಸುಸ್ತಿ ಸಾಲ ಮನ್ನಾ ಮಾಡಿರುವ ಕಾರಣ ಯಾವುದೇ ಬ್ಯಾಂಕ್‌ ರೈತರಿಗೆ ಹೊಸ ಸಾಲ ನೀಡುತ್ತಿಲ್ಲ. ಇದರ ವಿರುದ್ಧ ರಾಜ್ಯದಾದ್ಯಂತ ಬ್ಯಾಂಕ್‌ ಮುಚ್ಚಿ ಚಳವಳಿ ಆರಂಭಿಸಲಾಗುವುದು’ ಎಂದು ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !