ಶ್ರೀರಂಗಪಟ್ಟಣ: ‘ತಾಲ್ಲೂಕಿನ ಮಹದೇವಪುರ ಗ್ರಾಮದ ರೈತರು ನಾಲ್ಕೈದು ದಶಕಗಳಿಂದ ಉಳುಮೆ ಮಾಡುತ್ತಿರುವ ಜಮೀನಿನ ಬಳಿ ಇಸ್ಕಾನ್ ಸಂಸ್ಥೆ ಗೋಪ್ಯವಾಗಿ ದಾಖಲೆ ಸೃಷ್ಟಿಸಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದೆ’ ಎಂದು ಆರೋಪಿಸಿ ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಮಿನಿ ವಿಧಾನಸೌಧದ ಎದುರು ಮಹಾತ್ಮ ಗಾಂಧಿ ಮತ್ತು ಅಂಬೇ ಡ್ಕರ್ ಭಾವಚಿತ್ರ ಇಟ್ಟು ಬೆಳಿಗ್ಗೆಯಿಂದ ಸಂಜೆವರೆಗೂ ಪ್ರತಿಭಟನಾ ಧರಣಿ ನಡೆಸಿದರು. ಇಸ್ಕಾನ್ ವಿರುದ್ಧ ಘೋಷಣೆ ಕೂಗಿದರು.

‘ರೈತರು ಕೃಷಿ ಮಾಡುತ್ತಿರುವ ಜಮೀನಿಗೆ ಗೋಪ್ಯವಾಗಿ ದಾಖಲೆ ಸೃಷ್ಟಿಸಿ ಕೊಂಡಿರುವ ಇಸ್ಕಾನ್ ಸಂಸ್ಥೆ ಗೂಂಡಾಗಳ ಮೂಲಕ ರೈತರಿಗೆ ಬೆದರಿಕೆ ಹಾಕುತ್ತಿದ್ದು, ರಕ್ಷಣೆ ನೀಡಬೇಕು’ ಎಂದು ರೈತರು ಮನವಿ ಮಾಡಿದರು.

‘ಮಹದೇವಪುರ ಗ್ರಾಮದ ಸ.ನಂ. 411ರಲ್ಲಿ ಗೋಮಾಳಕ್ಕೆ ಸೇರಿದ ಜಮೀನಿನಲ್ಲಿ 30ಕ್ಕೂ ಹೆಚ್ಚು ರೈತರು 40 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಅದನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಜಮೀನನ್ನು ದರಖಾಸ್ತು ಮೂಲಕ ತಮ್ಮ ಹೆಸರಿಗೆ ಮಂಜೂರು ಮಾಡುವಂತೆ ತಾಲ್ಲೂಕು ಆಡಳಿತಕ್ಕೆ ಹಲವು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇಸ್ಕಾನ್ ಸಂಸ್ಥೆ ರೈತರ ಗಮನಕ್ಕೆ ಬಾರ ದಂತೆ ರೈತರು ಅನುಭವದಲ್ಲಿ ಇರುವ ಜಮೀನಿಗೆ ದಾಖಲೆ ಸೃಷ್ಟಿಸಿಕೊಂಡಿದೆ. ಮೂರು ದಿನಗಳಿಂದ ಈ ಜಮೀನಿಗೆ ತಂತಿ ಬೇಲಿ ಹಾಕುತ್ತಿದ್ದು, ಅದನ್ನು ತಡೆಯ ಬೇಕು’ ಎಂದು ಗಂಗಾ ಮತಸ್ಥರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರತಿಉಕ್ಕಡ ಎಂ.ಚಂದ್ರು ಒತ್ತಾಯಿಸಿದರು.

‘ರೈತರ ಜಮೀನಿಗೆ ಇಸ್ಕಾನ್ ಸಂಸ್ಥೆ ಹಾಕಿರುವ ಬೇಲಿಯನ್ನು ಮೂರು ದಿನಗಳ ಒಳಗಾಗಿ ತೆರವು ಮಾಡಿಸಬೇಕು. ಅನುಭವದ ಆಧಾರದ ಮೇಲೆ ರೈತರ ಹೆಸರಿಗೆ ಸಾಗುವಳಿ ಚೀಟಿ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ’ ಎಂದು ರೈತರು ಎಚ್ಚರಿಸಿದರು.

ಹೆಚ್ಚುವರಿ ತಹಶೀಲ್ದಾರ್ ರೇಖಾ ಅವರಿಗೆ ಮನವಿ ಸಲ್ಲಿಸಿದರು.

ಕಾವೇರಯ್ಯ, ಕಾಳಯ್ಯ, ನಿಂಗಯ್ಯ, ಮುತ್ತುನಾಯಕ್, ಚಿನ್ನಸ್ವಾಮಿ, ಎನ್. ಸ್ವಾಮಿ, ನಂಜುಂಡಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.