ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲುಕೋಟೆ; ಸಂಭ್ರಮದ ಅಷ್ಟತೀರ್ಥೋತ್ಸವ

ಮಳೆಯ ನಡುವೆ ನಡೆದ ಉತ್ಸವ
Last Updated 14 ನವೆಂಬರ್ 2021, 16:32 IST
ಅಕ್ಷರ ಗಾತ್ರ

ಮೇಲುಕೋಟೆ: ರಾಜಮುಡಿ ಬ್ರಹ್ಮೋತ್ಸವ ಸಂದರ್ಭದ ಚೆಲುವನಾರಾಯಣಸ್ವಾಮಿಯ ಅಷ್ಟತೀರ್ಥೋತ್ಸವ ಭಾನುವಾರ ಸಂಭ್ರಮದಿಂದ ನೆರವೇರಿತು.

50 ಕ್ಕೂ ಹೆಚ್ಚು ದಂಪತಿ ಮಡಿಲು ತುಂಬಿಕೊಂಡು ಪುತ್ರಭಾಗ್ಯ ಅಪೇಕ್ಷಿಸಿ ಎಂಟು ತೀರ್ಥಗಳಲ್ಲಿ ಸ್ನಾನಮಾಡಿ ಹರಕೆ ಸಲ್ಲಿಸಿದರು. ಸಂಜೆ ಉತ್ಸವ ಮುಕ್ತಾಯದ ಸಂದರ್ಭ ಸತತವಾಗಿ ಸುರಿದ ಮಳೆಯಿಂದ ಉತ್ಸವದಲ್ಲಿ ಭಾಗವಹಿಸಿದ್ದ ಭಕ್ತರು ಹಾಗೂ ವೈಕುಂಠ ಗಂಟೆಯ ಬಳಿ ನಡೆದ ಅಭಿಷೇಕಕ್ಕೆ ಅಡಚಣೆ ಉಂಟಾಯಿತು.

ಅಷ್ಟ ತೀರ್ಥೋತ್ಸವ ನಿಮಿತ್ತ ಬೆಳಿಗ್ಗೆ 5 ಗಂಟೆಗೆ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳನ್ನು ಆರಂಭಿಸಲಾಗಿತ್ತು. 7 ಗಂಟೆಯವೇಳೆಗೆ ವೇದಾಂತ ದೇಶಿಕರ ಸನ್ನಿಧಿಗೆ ಪಾದುಕೆಯ ಉತ್ಸವ ನೆರವೇರಿಸಿ 9 ಗಂಟೆಗೆ ವಜ್ರ ಖಚಿತ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವವನ್ನು ನೆರವೇರಿಸಲಾಯಿತು.

ಕಲ್ಯಾಣಿಯಲ್ಲಿ ಅಭಿಷೇಕ ಮುಗಿಯು ತ್ತಿದ್ದಂತೆ ಉತ್ಸವ ದೇವಾಲಯದ ತಲುಪಿದ ಬಳಿಕ ಸ್ವಾಮಿಯ ಪಾ ದುಕೆಯನ್ನು ವೇದಮಂತ್ರಗಳ ಪಠಣದೊಂದಿಗೆ ಪಲ್ಲಕ್ಕಿಯಲ್ಲಿ ಕೊಂಡೊಯ್ಯಲಾಯಿತು. ಗಿರಿಶಿಖರಗಳ ಮಧ್ಯೆ ಇರುವ ವೇದಪುಷ್ಕರಣಿ, ಧನುಷ್ಕೋಟಿ, ಯಾದವತೀರ್ಥ, ಧರ್ಬ ತೀರ್ಥ, ಪಲಾಷರ ತೀರ್ಥ, ಪದ್ಮತೀರ್ಥ, ನಾರಾಯಣ, ನರಸಿಂಹತೀರ್ಥಗಳಲ್ಲಿ ಅಭಿಷೇಕ ನೆರವೇರಿಸಲಾಯಿತು.

ಸಂಜೆ 6ಕ್ಕೆ ತೊಟ್ಟಿಲಮಡು ವೈಕುಂಠ ಗಂಗೆಯಲ್ಲಿ ಸಮಾರೋಪ ಅಭಿಷೇಕ ನೆರವೇರಿಸಿ ಗಿರಿಪ್ರದಕ್ಷಿಣೆಗೆ ಚಾಲನೆ ನೀಡಲಾಯಿತು.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ಇದ್ದರು. ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರಾಜೇಶ್, ಸಿಬ್ಬಂದಿ ತೊಟ್ಟಿಲಮಡು ಬಳಿ ದೇವರು ಸಾಗುವ ಮಾರ್ಗವನ್ನು ಸ್ವಚ್ಛಗೊಳಿಸಿದ್ದರು.

ತೆಲುಗು ಚಿತ್ರ ತಂಡದಿಂದ ಅಡಚಣೆ: ತೆಲುಗು ಚಲನಚಿತ್ರ ತಂಡವು ಅಷ್ಟತೀರ್ಥೋತ್ಸವದ ವೇಳೆ ಅಡಚಣೆ ಉಂಟುಮಾಡಿದ್ದರಿಂದ ನಾಗರಿಕರು ಮತ್ತು ಕೈಂಕರ್ಯಪರರ ಅಸಮಾಧಾನಗೊಂಡರು. ಕಲ್ಯಾಣಿಗೆ ಹೋಗುವ ರಸ್ತೆಯಲ್ಲಿ ಚಿತ್ರತಂಡ ತೆಲುಗು ಭಾಷೆಯ ಸ್ವಾಗತ ಕಮಾನು ನಿರ್ಮಿಸಿತ್ತು.

ನಾಗಾರ್ಜುನ ನಟಿಸುತ್ತಿರುವ ಬಂಗಾರರಾಜು-2 ತೆಲುಗು ಚಲನಚಿತ್ರದ ತಂಡ ಕಲ್ಯಾಣಿಗೆ ಹೋಗುವ ರಸ್ತೆಯ ಮಧ್ಯೆ ದ್ವಾರದ ರೀತಿಯಲ್ಲಿ ಸೆಟ್ ನಿರ್ಮಾಣಮಾಡಿತ್ತು. ಇದರಿಂದ ಚೆಲುವನಾರಾಯಣಸ್ವಾಮಿಯ ಉತ್ಸವ ಸಾಗಲು ಅಡಚಣೆ ಆಗಿ ಸಿನಿಮಾ ಸೆಟ್ ದ್ವಾರದಲ್ಲಿ ಬಗ್ಗಿಸಿಕೊಂಡು ನಡುಚಪ್ಪ ರವಿಲ್ಲದೆ ಮೆರವಣಿಗೆ ಮಾಡಲಾಯಿತು.

ದೇವಾಲಯದ ಆಡಳಿತ ರಾಜಮುಡಿ ಉತ್ಸವ ಮುಕ್ತಾಯವಾಗಿ ಕಲ್ಯಾಣಿಯಿಂದ ಸ್ವಾಮಿಯ ಉತ್ಸವ ದೇವಾಲಯಕ್ಕೆ ಸೇರುವವರೆಗೆ ಚಿತ್ರೀಕರಣ ತಂಡಕ್ಕೆ ನಿರ್ಬಂಧ ವಿಧಿ ಸಬೇಕಿತ್ತು ಎಂದು ಭಕ್ತರು ಬೇಸರ ಪ್ರತಿಕ್ರಿಯಿಸಿದರು.

ಮೇಲುಕೋಟೆಯ ಸ್ಮಾರಕಗಳ ರಕ್ಷಣೆ, ದೇವಾಲಯದ ಸಂಪ್ರ ದಾಯ ಕಾಪಾಡಲು ಚಲನಚಿತ್ರೀಕರಣವನ್ನು ನಿಷೇಧಿಸಬೇಕು. ಈ ಸಂಬಂಧ ದೇವಾಲಯದ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು ಎಂದು ಉತ್ಸವದಲ್ಲಿ ಭಾಗಿಯಾಗಿದ್ದ ಕೈಂಕರ್ಯಪರರು ಮತ್ತು ದೇವಾಲಯದ ಸಿಬ್ಬಂದಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT