ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳವಳ್ಳಿ: 8ರಂದು ಜಾನಪದ ಉತ್ಸವ

Last Updated 4 ನವೆಂಬರ್ 2019, 12:18 IST
ಅಕ್ಷರ ಗಾತ್ರ

ಮಳವಳ್ಳಿ: ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಭವನ ಬೆಂಗಳೂರು ಇವರ ಸಹಕಾರದೊಂದಿಗೆ ಕರ್ನಾಟಕ ಜಾನಪದ ಸಂಸ್ಕೃತಿ ಉತ್ಸವ 2019 ಕಾರ್ಯಕ್ರಮ ನ. 8ರಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಸರ್ಕಾರಿ ಬಾಲಕರ ಮಾಧ್ಯಮಿಕ ಶಾಲೆ(ಕೆಇಬಿ ಎದುರು) ಆವರಣದಲ್ಲಿ ನಡೆಯಲಿದೆ.

ಶರಣತತ್ವ ಚಿಂತಕ ಶಂಕರ್ ದೇವನೂರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶಾಸಕ ಡಾ.ಕೆ.ಅನ್ನದಾನಿಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಮಾಜಿ ಶಾಸಕರಾದ ಮಲ್ಲಾಜಮ್ಮ, ಬಾಲರಾಜ್, ಜಾನಪದ ವಿದ್ವಾಂಶ ಡಾ. ಪಿ.ಕೆ ರಾಜಶೇಖರ್, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಜಂಟಿ ನಿರ್ದೇಶಕ ವಿ.ಎನ್ ಮಲ್ಲಿಕಾರ್ಜುನಸ್ವಾಮಿ, ಕನ್ನಡ ಮತ್ತು ಸಾಂಸ್ಕೃತಿಕ ಸಹಾಯಕ ನಿರ್ದೇಶಕ ಚನ್ನಪ್ಪ, ಅಂತರರಾಷ್ಟ್ರೀಯ ಗಾಯಕ ಅಮ್ಮ ರಾಮಚಂದ್ರ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದಾರೆ.

ಜಾನಪದ ಸಂಸ್ಕೃತಿ ಉತ್ಸವದಲ್ಲಿ ಅಂತರರಾಷ್ಟ್ರೀಯ ಜಾನಪದ ಕಲಾವಿದ ಎಂ.ಮಹದೇವಸ್ವಾಮಿ ತಂಡದಿಂದ ಗಾಯನ, ಶೆಟ್ಟಹಳ್ಳಿ ಸಿದ್ದೇಗೌಡ ಚಿಕ್ಕಬೋರಯ್ಯ, ಕುಮಾರ್ ಅವರಿಂದ ಪೂಜಾಕುಣಿತ, ಕುಂತೂರು ಕುಮಾರ್, ಹೊನ್ನನಾಯಕನಹಳ್ಳಿ ಲಿಂಗರಾಜು ತಂಡದಿಂದ ತಮಟೆ ಪ್ರದರ್ಶನ, ಬೀಸು ಕಂಸಾಲೆ, ವೀರಗಾಸೆ ಗೊಂಬೆಕುಣಿತ ಹಾಗೂ ಎಚ್ಎಸ್ ಸರ್ವೋತ್ತಮ್, ಸಿದ್ದರಾಮು, ಶ್ರೀನಿವಾಸ್ ಅಪ್ಪಗೆರೆ ಸತೀಶ್ ಸೇರಿದಂತೆ ಜಾನಪದ ಗಾಯನ ಹಾಗೂ ಸೋಬಾನೆ ಪದ ಕಾರ್ಯಕ್ರಮ ನಡೆಯಲಿದೆ.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಿಬೇಕು ಎಂದು ಮಹೇಶ್ವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಅಧ್ಯಕ್ಷ ಮಳವಳ್ಳಿ ಎಂ. ಮಹದೇವಸ್ವಾಮಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT