ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಲಿಂಗೇಗೌಡ ನಿಧನ

Last Updated 18 ಆಗಸ್ಟ್ 2022, 16:18 IST
ಅಕ್ಷರ ಗಾತ್ರ

ಸಂತೇಬಾಚಹಳ್ಳಿ: ಇಲ್ಲಿನ ಅಘಲಯ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಸಿದ್ದಲಿಂಗೇಗೌಡ (96) ಅವರು ಗುರುವಾರ ನಿಧನರಾದರು.

ಸಿದ್ದಲಿಂಗೇಗೌಡ ಅವರು, ವಿದ್ಯಾರ್ಥಿಯಾಗಿದ್ದಾಗ ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರ್ಯ ಹೋರಾಟದ ಕರೆಗೆ ಓಗೊಟ್ಟು 1940ರಲ್ಲಿ ಮೈಸೂರಿನಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಸುಮಾರು 15ದಿನ ಶ್ರೀರಂಗಪಟ್ಟಣದಲ್ಲಿ ಕಾರಾಗೃಹ ವಾಸ ಅನುಭವಿಸಿದ್ದರು.

ಮಂಗಳೂರಿನಲ್ಲಿ ಆರ್.ಟಿ.ಒ.ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ, ಸ್ವಾತಂತ್ರ್ಯ ಚಳವಳಿಯ ತೀವ್ರತೆ ಹೆಚ್ಚಾದ ಕಾರಣ ದೇಶಾಭಿಮಾನ ಕಾರಣದಿಂದ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ವಿದ್ಯಾರ್ಥಿಗಳನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸಂಘಟಿಸಲು ಮುಂದಾಗಿದ್ದರು.

ಪೋಷಕರ ಒತ್ತಾಸೆಯ ಮೇರೆಗೆ ಪಾಂಡವಪುರ ಸಕ್ಕರೆ ಕಾರ್ಖಾನೆಯ ನೌಕರರಾಗಿ ಕೆಲಸಕ್ಕೆ ಸೇರಿದರು. ನಿವೃತ್ತಿಯ ನಂತರ ಹುಟ್ಟೂರಾದ ಅಘಲಯ ಗ್ರಾಮದಲ್ಲಿ ಕೃಷಿ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಅವರಿಗೆ ಆ.13ರಂದು ತಾಲ್ಲೂಕು ಆಡಳಿತವು ತಹಶೀಲ್ದಾರ್ ಎಂ.ವಿ.ರೂಪಾ ನೇತೃತ್ವದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಿತ್ತು. ಪ್ರಜಾವಾಣಿ ಪತ್ರಿಕೆಯಲ್ಲಿ ಅವರ ಬಗ್ಗೆ ಆ.15ರಂದು ಲೇಖನ ಪ್ರಕಟವಾಗಿತ್ತು.

ಆ.19ರಂದು ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮವಾದ ಅಘಲಯದಲ್ಲಿ ಅಂತ್ಯಕ್ತಿಯೆ ನಡೆಯಲಿದೆ ಎಂದು ಸಿದ್ದಲಿಂಗೇಗೌಡ ಅವರ ಪುತ್ರ ಜಗದೀಶ್ ಪ್ರಜಾವಾಣಿಗೆ ಮಾಹಿತಿ ನೀಡಿದರು.

ಅಘಲಯ ಗ್ರಾಮಕ್ಕೆ ತಹಶೀಲ್ದಾರ್ ರೂಪಾ ಭೇಟಿ ನೀಡಿ ಸಿದ್ದಲಿಂಗೇಗೌಡ (96) ಅವರಿಗೆ ತಾಲ್ಲೂಕು ಆಡಳಿತದಿಂದ ಗೌರವ ಸಲ್ಲಿಸಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಕಿಕ್ಕೇರಿ ಉಪತಹಶೀಲ್ದಾರ್ ಲಕ್ಷ್ಮಿಕಾಂತ್, ಗ್ರಾಮಲೆಕ್ಕಾಧಿಕಾರಿ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್, ಗ್ರಾಮಲೆಕ್ಕಾಧಿಕಾರಿ ಪ್ರವೀಣ್, ಅಘಲಯ ಶ್ರೀಧರ್, ಜಗದೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೇಮಾವತಿ ಲೋಕೇಶ್, ನಾಗರಾಜ್, ಕುಮಾರ್, ಶಿವರಾಮ್, ಯೋಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT