ಭಾನುವಾರ, ಜೂನ್ 20, 2021
28 °C

ಗೆಜ್ಜಲಗೆರೆ  ಕೊಲೆ ಪ್ರಕರಣ: ಏಳು ಆರೋಪಿಗಳ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು: ಮೇ 10ರಂದು ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮದ ಹೇಮಂತ್ ಕುಮಾರ್ ಎಂಬುವವರ ಕೊಲೆ ಪ್ರಕರಣವನ್ನು ಭೇದಿಸಿದ ಮದ್ದೂರು ಪೊಲೀಸರು, ಏಳು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

ಗೆಜ್ಹಲಗೆರೆಯ ಮನ್‌ಮುಲ್‌ಗೆ  ಕ್ಯಾಂಟರ್‌  ಬಾಡಿಗೆ ಬಿಡುವ ಸಂಬಂಧವಾಗಿ 2 ಗುಂಪಿನ ನಡುವೆ ದ್ವೇಷ ಏರ್ಪಟ್ಟು ಹಾಲಿನ ಒಕ್ಕೂಟದ ಕಚೇರಿ ಮುಂದೆ ಗೆಜ್ಜಲಗೆರೆಯ ಹೇಮಂತ್ ಕುಮಾರ್‌ನ ಬೈಕ್‌ಗೆ ಕಾರು  ಡಿಕ್ಕಿ ಹೊಡೆಸಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ನಂತರ ತಲೆಯ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದರು.

ಪ್ರಕರಣವನ್ನು ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ್ ಪ್ರಸಾದ್ ನೇತೃತ್ವದಲ್ಲಿ ಮದ್ದೂರಿನ ಸಿ.ಪಿ.ಐ ಭರತ್ ಗೌಡ, ಪಿ.ಎಸ್.ಐ ನವೀನ್ ಗೌಡ ಜಾಲ ಬೀಸಿ ಚನ್ನಪಟ್ಟಣ ತಾಲ್ಲೂಕಿನ ಮುದಗೆರೆ ಗೇಟ್ ಬಳಿ ಆರೋಪಿಗಳಾದ ಇಂದುಕುಮಾರ್, ಮಧು, ನಾಗರಾಜು, ಪ್ರಸಾದ್, ಸ್ವರೂಪ್ ಗೌಡ, ಮಹದೇವು ಹಾಗೂ ಅವಿನಾಶ್ ಎಂಬುವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಮಾರುತಿ ಸ್ವಿಫ್ಟ್ ಕಾರು ಮತ್ತು 3 ಮೋಟಾರ್ ಬೈಕ್‌ಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.