ಮಂಡ್ಯ: ಇಲ್ಲಿನ ಗಾಂಧಿ ಭವನದಲ್ಲಿ ಆಯೋಜಿಸಿರುವ ‘ಆಪ್ತ ಸಂವಾದ - ಒಂದು ಪುಸ್ತಕ ಕ್ರಾಂತಿ’ ಸರಣಿಯ ನಾಲ್ಕನೆಯ ಸಂಚಿಕೆಯು ಮೇ 3ರ ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

ಈ ಬಾರಿಯ ಸಂಚಿಕೆಯಲ್ಲಿ ಲೇಖಕ, ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅವರ ಜನಪ್ರಿಯ ಕೃತಿಯಾದ ‘ನನ್ನೊಳಗಿನ ಹಾಡು ಕ್ಯೂಬಾ’ ಪುಸ್ತಕದ ಕುರಿತು ಸಂವಾದ ನಡೆಯಲಿದೆ.

ಕಿರುಚಿತ್ರ ನಿರ್ದೇಶಕ ವಿನಯ್ ಕುಮಾರ್ ಎಂ.ಜಿ. ಈ ಸಂವಾದವನ್ನು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಪರಿಚಯ ಪ್ರಕಾಶನದ ಸಂಸ್ಥಾಪಕ ಶಿವಕುಮಾರ್ ಆರಾಧ್ಯ ನಿರ್ವಹಿಸಲಿದ್ದಾರೆ.

ಪ್ರತಿ ತಿಂಗಳ ಮೊದಲ ಭಾನುವಾರ ನಿಯಮಿತವಾಗಿ ನಡೆಯುವ ಈ ಕಾರ್ಯಕ್ರಮವು ಓದುಗರು ಮತ್ತು ಲೇಖಕರ ನಡುವೆ ನೇರ ಸಂವಾದ ಏರ್ಪಡಿಸುವ ಮೂಲಕ ಜಿಲ್ಲೆಯಲ್ಲಿ ವಿಶಿಷ್ಟ ಪುಸ್ತಕ ಸಂಸ್ಕೃತಿಯನ್ನು ಬೆಳೆಸುತ್ತಿದೆ. ಕನ್ನಡ-ಕರ್ನಾಟಕ ಫೌಂಡೇಷನ್ ಹಾಗೂ ಎಂಪ್ಟಿ ಪಾಕೆಟ್ ಡ್ರೀಮ್ಸ್ ಇದನ್ನು ಆಯೋಜಿಸಿದೆ. ಇವರೊಂದಿಗೆ ಬಹುರೂಪಿ ಫೌಂಡೇಶನ್ ಹಾಗೂ ರೈತರ ಶಾಲೆಯ ಸಹಯೋಗವಿದೆ.

ಆಪ್ತ ಸಂವಾದ ಕಾರ್ಯಕ್ರಮದ ಮುಖಾಂತರ ಸಾರ್ವಜನಿಕರು ತಿಂಗಳಿಗೊಂದು ಪುಸ್ತಕವನ್ನು ಓದಿ, ಆ ಪುಸ್ತಕದ ಲೇಖಕರೊಡನೆ ಚರ್ಚಿಸುವ ವಿಶಿಷ್ಟ ಅವಕಾಶವನ್ನು ಈ ವೇದಿಕೆ ಕಲ್ಪಿಸಿಕೊಡುತ್ತಿದೆ. ಆಸಕ್ತ ಪುಸ್ತಕ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.