ಹಲಗೂರು: ಸ್ವಚ್ಛತೆ ಮೂಲಕ ಸುತ್ತಲಿನ ಪ್ರದೇಶವನ್ನು ಶುಚಿಗೊಳಿಸುವ ಪೌರ ಕಾರ್ಮಿಕರ ಕಾರ್ಯ ಮಹತ್ವವಾದುದು. ಇಂತಹ ಪೌರ ಕಾರ್ಮಿಕರನ್ನು ಗೌರವಿಸುವ ಡಿ.ಆರ್.ಗುರು-ಶಿಷ್ಯರ ಬಳಗದ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಶಿಕ್ಷಕ ಭೈರವಯ್ಯ ಹೇಳಿದರು.

ಬಳಗದಿಂದ ಹಲಗೂರಿನ ವೃತ್ತದಲ್ಲಿ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ‘ಪೌರ ಕಾರ್ಮಿಕರಿಗೆ ಸನ್ಮಾನ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಳಗದ ಅಧ್ಯಕ್ಷ ಎ.ಎಸ್.ದೇವರಾಜು ಮಾತನಾಡಿ, ಶಿಕ್ಷಕನಾಗಿದ್ದ ನಾನು ನಿವೃತ್ತಿ ನಂತರ ವಿದ್ಯಾರ್ಥಿಗಳನ್ನು ಸೇರಿಸಿ ಡಿ.ಆರ್.ಗುರು-ಶಿಷ್ಯರ ಬಳಗ ಕಟ್ಟಿ ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ಎಂದರು.

ಗ್ರಾಮ ಪಂಚಾಯಿತಿ ಪೌರಕಾರ್ಮಿಕರಾದ ಭದ್ರಸ್ವಾಮಿ, ರಮೇಶ್, ಮಹದೇವಮೂರ್ತಿ, ಪ್ರದೀಪ್, ರೇಣುಕಮ್ಮ, ಸವಿತ, ಪಾರ್ವತಮ್ಮ, ಲಕ್ಷ್ಮಣ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಾದ ಟಿ.ಆರ್.ಚಂದುಶ್ರೀ, ಪಿಯುಸಿ ಕಲಾ ವಿಭಾಗದಿಂದ ವೈ.ಎಸ್.ಪದ್ಮ, ವಾಣಿಜ್ಯ ವಿಭಾಗದಿಂದ ಮಾನಸ, ವಿಜ್ಞಾನ ವಿಭಾಗದಿಂದ ಎಚ್.ಪಿ. ಜ್ಞಾನೇಶ್, ಪ್ರೀತಮ್ ಸನ್ಮಾನಿಸಲಾಯಿತು. ಉಪಾಧ್ಯಕ್ಷ ಸುರೇಂದ್ರ, ಖಜಾಂಚಿ ಅಭಿಜಿತ್ ಬಸವರಾಜು, ಪದಾಧಿಕಾರಿಗಳಾದ ಚಂದ್ರು, ತಮ್ಮಣ್ಣಗೌಡ, ಮನೋಹರ್, ಎನ್.ಕೆ.ಕುಮಾರ್, ಶಿಕ್ಷಕ ಜಿ.ಎಸ್.ಕೃಷ್ಣ, ಬೈರವಯ್ಯ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-40-2129287123

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.