ಹಲಗೂರು: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯರ ಸೇವೆ ಲಭ್ಯವಿಲ್ಲದ ಪರಿಣಾಮ ರೋಗಿಗಳು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.

ಮಳವಳ್ಳಿ ತಾಲ್ಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವಾಗಿರುವ ಹಲಗೂರು ದಾಖಲೆಗಳಲ್ಲಿ ಗ್ರಾಮವಾಗಿದ್ದರೂ, ಜನಸಂಖ್ಯೆ ಏರಿಕೆಯಿಂದಾಗಿ ಪಟ್ಟಣದ ರೂಪ ಪಡೆದಿದೆ. ಗ್ರಾಮೀಣ ಪ್ರದೇಶದ ಜನಸಾಮಾನ್ಯರು, ಬಡವರು, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಕೂಲಿ ಕಾರ್ಮಿಕರು ಸರ್ಕಾರಿ ಆಸ್ಪತ್ರೆಯನ್ನೇ ಚಿಕಿತ್ಸೆಗೆ ಅವಲಂಬಿಸಿದ್ದಾರೆ.

ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸುಸಜ್ಜಿತ ಕಟ್ಟಡ ಹೊಂದಿದ್ದರೂ ಈ ಹಿಂದೆ ವೈದ್ಯರಾಗಿ ಸೇವೆ ಸಲ್ಲಿಸಿತ್ತಿದ್ದ ಡಾ.ಸೌಮ್ಯಶ್ರೀ ಉನ್ನತ ಶಿಕ್ಷಣಕ್ಕಾಗಿ ತೆರಳಿದ್ದರಿಂದಾಗಿ ಇಲ್ಲಿನ ವೈದ್ಯರ ಸ್ಥಾನ ಹಲವು ದಿನಗಳಿಂದ ಖಾಲಿ ಉಳಿದಿದೆ. ವೈದ್ಯರು ಇಲ್ಲದ ಪರಿಣಾಮ ರೋಗಿಗಳು ಮಳವಳ್ಳಿ ಸೇರಿದಂತೆ ಸುತ್ತಮುತ್ತಲಿನ ಆಸ್ಪತ್ರೆಗಳಿಗೆ ತೆರಳಬೇಕಾದ ಸಂಕಷ್ಟ ಎದುರಾಗಿದೆ.

ಹುಸ್ಕೂರು, ದಳವಾಯಿ ಕೋಡಿಹಳ್ಳಿ ಕೇಂದ್ರಗಳ ವೈದ್ಯರು ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಭಾರ ಸೇವೆ ಮೇಲೆ ಹಂಚಿಕೆ ಅಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ದಳವಾಯಿ ಕೋಡಿಹಳ್ಳಿ ಮತ್ತು ಹುಸ್ಕೂರು ಕೇಂದ್ರಗಳಲ್ಲಿ ರೋಗಿಗಳು ಸಮಸ್ಯೆ ಬಗೆಹರಿಸಲು ಹೆಚ್ಚುವರಿ ವೈದ್ಯರ ಅಗತ್ಯತೆ ಎದುರಾಗಿದೆ.

ಪ್ರವಾಸಿ ತಾಣ ಮುತ್ತತ್ತಿ ಮತ್ತು ರಾಷ್ಟ್ರೀಯ ಹೆದ್ದಾರಿ -948 ಸಹ ಹಲಗೂರು ನಡುವೆ ಹಾದು ಹೋಗಿದ್ದು, ರಸ್ತೆ ಅಪಘಾತ ಸಂಭವಿಸಿದರೆ ತುರ್ತು ಚಿಕಿತ್ಸೆ ಪಡೆಯಲು ಮಳವಳ್ಳಿಗೆ ತೆರಳಬೇಕಿದೆ. ಕೂಡಲೇ ನಿಟ್ಟೂರು ಮತ್ತು ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕಾಯಂ ವೈದ್ಯರನ್ನು ನೇಮಿಸಬೇಕೆಂಬುದು ಈ ಭಾಗದ ನಿವಾಸಿಗಳ ಒತ್ತಾಯ.

‘ಸುಮಾರು 20 ಸಾವಿರ ಜನಸಂಖ್ಯೆಯುಳ್ಳ ಗ್ರಾಮದಲ್ಲಿ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರ ನೇಮಕ ಮಾಡದಿರುವುದು ದುಃಖದ ವಿಷಯ. ಆರೋಗ್ಯ ಸೇವೆಗೆ ಸರ್ಕಾರ ಪ್ರಥಮ ಆದ್ಯತೆ ನೀಡಬೇಕು’ ಎಂದು ಹಲಗೂರು ನಿವಾಸಿ ಅಭಿಜಿತ್ ಬಸವರಾಜು ಮನವಿ ಮಾಡಿದ್ದಾರೆ.

ಸರ್ಕಾರದ ಮಟ್ಟದಲ್ಲಿ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹಲಗೂರು ಕೇಂದ್ರಕ್ಕೆ ಡಿಎಚ್ಒ ಅದೇಶದ ಮೇರೆಗೆ ತಾತ್ಕಾಲಿಕವಾಗಿ ವೈದ್ಯರನ್ನು ನಿಯೋಜಿಸಲಾಗಿದೆ
ಡಾ.ಪಿ. ವೀರಭದ್ರಪ್ಪ ತಾಲ್ಲೂಕು ಆರೋಗ್ಯ ಅಧಿಕಾರಿ ಮಳವಳ್ಳಿ

ಕೇಂದ್ರದಲ್ಲಿ ಕಾಯಂ ವೈದ್ಯರಿಲ್ಲದೇ ಹಿರಿಯ ನಾಗರಿಕರು ಮಕ್ಕಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ಇಬ್ಬರು ತಜ್ಞ ವೈದ್ಯರನ್ನು ಕೂಡಲೇ ನೇಮಿಸಬೇಕು
ಕೆ.ಜಿ.ಸಿದ್ದಲಿಂಗಮೂರ್ತಿ ಕೊನ್ನಾಪುರ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.