ಹಲಗೂರು: 44 ವರ್ಷಗಳ ಹಿಂದೆ ಆರಂಭವಾದ ಹಲಗೂರು ಲಯನ್ಸ್ ಕ್ಲಬ್ ನಿರಂತರವಾಗಿ ಹಲವು ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಕ್ಲಬ್ ವತಿಯಿಂದ ಮತ್ತಷ್ಟು ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನಸಾಮಾನ್ಯರಿಗೆ ನೆರವಾಗಿ ಎಂದು ಜಿಲ್ಲಾ ಗವರ್ನರ್ ಕೆ.ಎಲ್.ರಾಜಶೇಖರ್ ಸಲಹೆ ನೀಡಿದರು.

ಹಲಗೂರಿನ ಚನ್ನಪಟ್ಟಣ ರಸ್ತೆಯಲ್ಲಿರುವ ಲಯನ್ಸ್ ಭವನದಲ್ಲಿ ಈಚೆಗೆ ನಡೆದ ನಡೆದ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಪ್ರತಿನಿತ್ಯವೂ ಸೇವಾ ಕಾರ್ಯಕ್ರಮ ಆಯೋಜಿಸುತ್ತಿರುವ ಜಿಲ್ಲೆಯ ಹಿರಿಯ ಕ್ಲಬ್ ಇದಾಗಿದ್ದು, ಗ್ರಾಮೀಣ ಪ್ರದೇಶದಲ್ಲಿದ್ದರೂ ನಗರ ಪ್ರದೇಶದ ಕ್ಲಬ್ಗಳಿಗೆ ಪೈಪೋಟಿ ನೀಡಿ 2ನೇ ಸ್ಥಾನ ಪಡೆದುಕೊಂಡಿದೆ. ಕ್ಲಬ್ ಸೇವಾ ಕಾರ್ಯಗಳಿಗೆ ಹಿಡಿದ ಕೈಗನ್ನಡಿ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕ್ಲಬ್ ಅಧ್ಯಕ್ಷ ಜಿ.ಎಸ್.ಮನೋಹರ್ ಮಾತನಾಡಿ, ‘ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದ್ದು, ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಅವರಣದಲ್ಲಿ ಇಲ್ಲಿಯವರೆಗೆ 616 ದಿನಗಳ ಕಾಲ ಪ್ರತಿನಿತ್ಯ ನಿರಂತರವಾಗಿ ಹಸಿವು ನಿವಾರಣಾ ಕಾರ್ಯಕ್ರಮ ಮಾಡಲಾಗಿದೆ. 30ಕ್ಕೂ ಹೆಚ್ಚು ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲಾಗಿದ್ದು, ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಕ್ಲಬ್ ನೆರವಾಗಿದೆ’ ಎಂದರು.

ಕ್ಯಾನ್ಸರ್ನಿಂದ ಬಳಲುತ್ತಿರುವ ಲಿಂಗಪಟ್ಟಣ ಗ್ರಾಮದ ವಾಸಿ ಎಲ್.ಎಂ.ರವಿ ಅವರಿಗೆ ಕ್ಲಬ್ ವತಿಯಿಂದ ₹20 ಸಾವಿರ ಸಹಾಯಧನ ನೀಡಲಾಯಿತು.

ಜಿಲ್ಲಾ ಗವರ್ನರ್ ಕೆ.ಎಲ್.ರಾಜಶೇಖರ್, ಉಪ ರಾಜ್ಯಪಾಲ ಮತಿದೇವ್ ಕುಮಾರ್, ವೆಂಕಟೇಶ್, ಕೆ.ಎಸ್.ಸುನೀಲ್ ಕುಮಾರ್, ಪ್ರಾಂತೀಯ ಅಧ್ಯಕ್ಷ ಸೋಮೇಗೌಡ, ಡಾ.ಎ.ಎಸ್.ನಾಗೇಶ್, ಡಾ.ಶಂಷುದ್ದೀನ್, ಸುರೇಶ್, ಚಿಕ್ಕೇಗೌಡ, ಲಯನ್ಸ್ ಕ್ಲಬ್ ಅಧ್ಯಕ್ಷ ಜಿ.ಎಸ್.ಮನೋಹರ್, ಕಾರ್ಯದರ್ಶಿಎ.ಟಿ. ಶ್ರೀನಿವಾಸ್, ಖಜಾಂಚಿ ಸಿ.ಪ್ರವೀಣ್ ಹಲವರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-40-1137080793

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.