ಹಲಗೂರು: ನಾಟಕಗಳಲ್ಲಿ ಜೀವನ ಮೌಲ್ಯಗಳು ಅಡಕವಾಗಿದ್ದು, ಜನಸಾಮಾನ್ಯರು ಪೌರಾಣಿಕ ನಾಟಕಗಳ ಮೂಲಕ ಶ್ರದ್ಧೆ ಮತ್ತು ಭಕ್ತಿಯ ಜೊತೆಗೆ ವಿಚಾರಶೀಲತೆ ಬೆಳೆಸಿಕೊಳ್ಳಬೇಕು ಎಂದು ಮಾಜಿ ಶಾಸಕ ಕೆ.ಅನ್ನದಾನಿ ತಿಳಿಸಿದರು.

ಚಿಲ್ಲಾಪುರ ಗ್ರಾಮದ ಸಿದ್ದಪ್ಪಾಜಿ ದೇವಾಲಯದ ಅವರಣದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ 'ಶ್ರೀ ಧರೆಗೆ ದೊಡ್ಡವರ ವಚನ ಅಥವ ಸಿದ್ದಪ್ಪಾಜಿ ಪವಾಡ' ನಾಟಕ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಉಸಿರಾಡುತ್ತಿರುವ ನಾಟಕ ಕಲೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸಬೇಕಿದೆ ಎಂದರು.

ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಪಂಕ್ತಿಸೇವೆ, ಪ್ರಸಾದ ವಿನಿಯೋಗ, ಸ್ವಾಮಿಯ ಜಯಂತ್ಯುತ್ಸವ, ಮುತ್ತಾಂಜನೇಯ ಉತ್ಸವ ಸೇವೆ ಮತ್ತು ಅನ್ನ ಸಂತರ್ಪಣೆ ನಡೆಯಿತು. ಮೂರು ದಿನ ಸಮೀಪದ ಸಾವಿರಾರು ಭಕ್ತಾಧಿಗಳು ಸಿದ್ದಪ್ಪಾಜಿ ಜಾತ್ರೋತ್ಸವದಲ್ಲಿ ಇದ್ದರು.

ವಿಶ್ವಕರ್ಮ ಸೇವಾ ಟ್ರಸ್ಟ್ ಅಧ್ಯಕ್ಷ ಈಶ ಕುಮಾರ್, ಕಾರ್ಯದರ್ಶಿ ರಾಮಚಂದ್ರಚಾರ್, ಪಂಚಾಯಿತಿ ಮಾಜಿ ಸದಸ್ಯ ಎಚ್.ಕೆ.ಮೂರ್ತಿ, ಮುಖಂಡರಾದ ಉಮೇಶ್, ಸಿದ್ದಾಚಾರಿ, ತಮ್ಮಣ್ಣ ಗೌಡ, ನಂದೀಪುರ ನಾಗರಾಜು, ಎನ್.ಕೆ.ಕುಮಾರ್, ಬಸವರಾಜು, ಪುಟ್ಟಸ್ವಾಮಾಚಾರ್, ಮೋದಿ ರವಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-40-391630844

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.