ದುಂದುವೆಚ್ಚ: ರಾಜ್ಯಪಾಲರಿಗೆ ದೂರು

7

ದುಂದುವೆಚ್ಚ: ರಾಜ್ಯಪಾಲರಿಗೆ ದೂರು

Published:
Updated:

ಮಂಡ್ಯ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರಮಾಣವಚನ ಸಮಾರಂಭದ ದಿನ ಗಣ್ಯರ ವಾಸ್ತವ್ಯಕ್ಕೆ ಮಾಡಲಾದ ವೆಚ್ಚವನ್ನು ಜೆಡಿಎಸ್‌ ಪಕ್ಷದ ವತಿಯಿಂದಲೇ ಭರಿಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಬಿ.ಎಸ್‌.ಗೌಡ ಸೋಮವಾರ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.

10 ನಿಮಿಷಗಳ ಪ್ರಮಾಣವಚ ಕಾರ್ಯಕ್ರಮಕ್ಕೆ ತೃತೀಯ ರಂಗದ ಮುಖಂಡರನ್ನು ಆಹ್ವಾನಿಸಲಾಗಿತ್ತು. ಸರ್ಕಾರಿ ಅತಿಥಿಗೃಹಗಳು ಇದ್ದರೂ ದುಬಾರಿ ಶುಲ್ಕದ ಖಾಸಗಿ ಹೋಟೆಲ್‌ಗಳಲ್ಲಿ ಗಣ್ಯರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೆಲವೇ ಗಂಟೆಗಳ ವಾಸ್ತವ್ಯಕ್ಕೆ ₹ 42 ಲಕ್ಷ ಬಿಲ್‌ ಪಾವತಿ ಮಾಡಲಾಗಿದೆ. ಕೊಠಡಿಗಳನ್ನು ಜೆಡಿಎಸ್‌ ಮುಖಂಡರು ಕಾಯ್ದಿರಿಸಿದ್ದು ಸರ್ಕಾರದ ವತಿಯಿಂದ ಬಿಲ್‌ ಪಾವತಿ ಮಾಡಲಾಗಿದೆ. ದುಂದುವೆಚ್ಚಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಮುಖ್ಯಮಂತ್ರಿಗಳು ತಮ್ಮ ಪಕ್ಷದ ವತಿಯಿಂದ ವೆಚ್ಚ ಭರಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿಯಾಗಿ ವೆಚ್ಚ ಮಾಡುವುದು ಸರಿಯಲ್ಲ. ಸರಳ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಕುಮಾರಸ್ವಾಮಿ ಅವರು ಅದ್ಧೂರಿಯಾಗಿ ಪ್ರಮಾಣವಚನ ಸ್ವೀಕರಿಸಿ ಹಣ ವ್ಯರ್ಥಗೊಳಿಸಿದ್ದಾರೆ. ಮುಖ್ಯಮಂತ್ರಿಯೂ ಸೇರಿ ಸರ್ಕಾರಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !