ಶ್ರೀರಂಗಪಟ್ಟಣ: ‘ಆರೋಗ್ಯ ಪೂರ್ಣ ಜೀವನ ಬಯಸುವವರು ಶುದ್ಧ ಮತ್ತು ಪೌಷ್ಟಿಕ ಆಹಾರ ಸೇವಿಸಬೇಕು’ ಎಂದು ಡಾ.ಕೆ.ವೈ. ಶ್ರೀನಿವಾಸ್ ಸಲಹೆ ನೀಡಿದರು.

ಪಟ್ಟಣದಲ್ಲಿ ಶ್ರೀರಂಗ ಪಾಲಿ ಕ್ಲಿನಿಕ್, ಶ್ರೀರಂಗ ಡಯಾಗ್ನೋಸ್ಟಿಕ್ ಸೆಂಟರ್, ಶ್ರೀರಂಗಪಟ್ಟಣ ರೋಟರಿ ಕ್ಲಬ್ ಮತ್ತು ಮೈಸೂರಿನ ಮಹಾವೀರ ಕಣ್ಣಿನ ಆಸ್ಪತ್ರೆಯ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

‘ಅತಿಯಾದ ಕೊಬ್ಬಿನ ಅಂಶ ಮತ್ತು ಮಸಾಲೆಯುಕ್ತ ಆಹಾರ ದೇಹಕ್ಕೆ ಒಳ್ಳೆಯದಲ್ಲ. ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವುದು ಮತ್ತು ತೀರಾ ಉಪವಾಸ ಇರುವುದು ಎರಡೂ ಸರಿಯಲ್ಲ. ಆಹಾರದಲ್ಲಿ ಹಣ್ಣು, ತರಕಾರಿ, ಸೊಪ್ಪು, ಕಾಳು, ಮೀನು, ಮೊಟ್ಟೆ, ಹಾಲು ಇರಬೇಕು. ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಬೇಕು. ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯುಬೇಕು. ಹಾಗಾದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ’ ಎಂದು ಹೇಳಿದರು.

ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಮಾತನಾಡಿ, ‘ಒಂದಿಲ್ಲೊಂದು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ನಡಿಗೆ, ಶುದ್ಧ ಗಾಳಿ ಸೇವನೆ, ಮನರಂಜನೆಗಳು ಅಗತ್ಯ. ಇದರಿಂದ ಒತ್ತಡ ನಿವಾರಣೆಯಾಗಿ ದೇಹ ಮತ್ತು ಮನಸ್ಸು ಉಲ್ಲಸಿತವಾಗಿರುತ್ತದೆ’ ಎಂದರು.

ಶ್ರೀರಂಗ ಪಾಲಿ ಕ್ಲಿನಿಕ್ ಮತ್ತು ಶ್ರೀರಂಗ ಡಯಾಗ್ನೋಸ್ಟಿಕ್ ಸೆಂಟರ್ ಮುಖ್ಯಸ್ಥ ಶ್ರೀಧರ್ ಮಾತನಾಡಿ, ‘ಪ್ರತಿ ತಿಂಗಳು ಆರೋಗ್ಯ ಉಚಿತ ತಪಾಸಣಾ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ರಕ್ತದೊತ್ತಡ, ಮಧುಮೇಹ, ಮೂಳೆ ಮತ್ತು ಕೀಲು, ಹೃದಯ ಸಂಬಂಧಿ ಸಮಸ್ಯೆಗಳ ಪರೀಕ್ಷೆ ನಡೆಸಿ ಉಚಿತವಾಗಿ ಸಲಹೆ ನೀಡಲಾಗುವುದು. ಅಗತ್ಯ ಇರುವವರಿಗೆ ಉಚಿತವಾಗಿ ಔಷಧಗಳನ್ನೂ ಕೊಡಲಾಗುವುದು’ ಎಂದು ತಿಳಿಸಿದರು.

ಪುರಸಭೆ ಮಾಜಿ ಸದಸ್ಯೆ ಕಾವೇರಮ್ಮ ಶೇಷಾದ್ರಿ, ಶ್ರೀರಂಗಪಟ್ಟಣ ರೋಟರಿ ಕ್ಲಬ್ ಅಧ್ಯಕ್ಷ ಮಂಜುರಾಂ, ಆರ್.ರಾಘವೇಂದ್ರ, ಪೂಜಾ ಶ್ರೀಧರ್, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಕೆ.ಎಸ್. ಜಯಶಂಕರ್, ವನರಾಜು, ಶಿವಕುಮಾರ್, ಮಹಾವೀರ ಜೈನ್ ಆಸ್ಪತ್ರೆಯ ಶಿಯಾನ, ಅರವಿಂದ್ ಇದ್ದರು.

ಶಿಬಿರದಲ್ಲಿ 200ಕ್ಕೂ ಹೆಚ್ಚು ಜನರ ಆರೋಗ್ಯ ಮತ್ತು ನೇತ್ರ ತಪಾಸಣೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.