ಸೋಮವಾರ, ಸೆಪ್ಟೆಂಬರ್ 20, 2021
29 °C

ಹೆಬ್ಬಾವು ಪ್ರತ್ಯಕ್ಷ: ಕಾಡಿಗೆ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರದ ಪ್ರಸನ್ನ ಎಂಬುವರ ಜಮೀನಿನ ಬಳಿ ಶನಿವಾರ ಹೆಬ್ಬಾವು ಪ್ರತ್ಯಕ್ಷವಾಗಿದೆ.

ಸುಮಾರು 12 ಅಡಿ ಉದ್ದದ 40 ಕೆ.ಜಿ ತೂಕದಷ್ಟಿರುವ ಹೆಬ್ಬಾವು ಕಾಣಿಸಿಕೊಂಡಿದೆ. ತೋಟದ ಮನೆಯ ಕೋಳಿ ಸಾಕಣೆ ಕೇಂದ್ರದ ಬಳಿ ಹಾವು ಪತ್ತೆಯಾಗಿದೆ. ಅದು ಕೋಳಿಯನ್ನು ನುಂಗುವ ವೇಳೆ ಕೋಳಿಗಳ ಚೀರಾಟ ಕೇಳಿ ಪ್ರಸನ್ನ ಧಾವಿಸಿದ್ದಾರೆ. ದೊಣ್ಣೆಯಿಂದ ಹಾವಿನ ತಲೆಯನ್ನು ಅದುಮಿ ಕೋಳಿಯನ್ನು ಬಿಡಿಸಿದ್ದಾರೆ.

ತೋಟದಿಂದ ಗ್ರಾಮಕ್ಕೆ ಹೆಬ್ಬಾವು ತಂದು ಕೆಲಕಾಲ ಇರಿಸಿಕೊಂಡಿದ್ದರು. ಯುವಕರು ಹೆಬ್ಬಾವಿನ ಜತೆ ಫೋಟೊ ತೆಗೆಸಿಕೊಂಡು ಖುಷಿಪಟ್ಟರು. ಹಾವನ್ನು ನೋಡಲು ಜನರು ಮುಗಿ ಬಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿ ಮಧು ಹೆಬ್ಬಾವನ್ನು ವಶಕ್ಕೆ ಪಡೆದರು. ನಂತರ ಸಮೀಪದ ಕಾಡಿಗೆ ಬಿಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು