ಮಂಡ್ಯ: ಅಭ್ಯರ್ಥಿ ಕಣಕ್ಕಿಳಿಸದಿದ್ದರೆ ಕಾಂಗ್ರೆಸ್‌ ಸರ್ವನಾಶ -ಮಧು ಮಾದೇಗೌಡ

7

ಮಂಡ್ಯ: ಅಭ್ಯರ್ಥಿ ಕಣಕ್ಕಿಳಿಸದಿದ್ದರೆ ಕಾಂಗ್ರೆಸ್‌ ಸರ್ವನಾಶ -ಮಧು ಮಾದೇಗೌಡ

Published:
Updated:
Deccan Herald

ಮದ್ದೂರು: ‘ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸದಿದ್ದರೆ ಪಕ್ಷ ಸರ್ವನಾಶವಾಗಲಿದೆ’ ಎಂದು ಮಾಜಿ ಶಾಸಕ ಮಧು ಜಿ.ಮಾದೇಗೌಡ ಹೇಳಿದರು.

ಪಟ್ಟಣದಲ್ಲಿ ಶನಿವಾರ ಕಾಂಗ್ರೆಸ್ ಕಾರ್ಮಿಕ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ವಿಜೇಂದ್ರ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ ನಿಜ. ಆದರೆ, ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಜೆಡಿಎಸ್‌ನಷ್ಟೇ ಬಲಾಢ್ಯ ಪಕ್ಷವಾಗಿದೆ. ಇಲ್ಲಿ ಪಕ್ಷದಿಂದ ಅಭ್ಯರ್ಥಿ ಕಣಕ್ಕಿಳಿಸದಿದ್ದಲ್ಲಿ ಪಕ್ಷಕ್ಕೆ ಮುಂದೆ ಸಾಕಷ್ಟು ಹಾನಿಯಾಗಲಿದೆ. ಕಾಂಗ್ರೆಸ್ ಕಾರ್ಯಕರ್ತರು ಅನಾಥರಾಗುವುದು ನಿಶ್ಚಿತ’ ಎಂದರು.

ರಾಜ್ಯ ಕಾರ್ಮಿಕ ಕಾಂಗ್ರೆಸ್ ಅಧ್ಯಕ್ಷ ಕೆ.ವೈ.ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಶಿವರಾಜು, ಟಿಎಪಿಸಿಎಂಎಸ್ ಸದಸ್ಯ ಕಬ್ಬಾಳಯ್ಯ, ಮುಖಂಡರಾದ ಮಾಚಹಳ್ಳಿಕುಮಾರ್, ಸಿದ್ದು, ಸತೀಶ್, ಉಮೇಶ್, ರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !