ಕಿಕ್ಕೇರಿ: ‘ಭಾರತ ಸನಾತನ ಸಂಸ್ಕೃತಿಯ ತಾಯಿಬೇರಾಗಿದ್ದು, ಇಡೀ ವಿಶ್ವವೇ ಮೆಚ್ಚಿ ಗೌರವಿಸುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಹೋಬಳಿಯ ತುಳಸಿ ಗ್ರಾಮದಲ್ಲಿ ಬಸವೇಶ್ವರ ದೇಗುಲ ಉದ್ಘಾಟನೆ, ವಿಮಾನ ಗೋಪುರ, ಕಳಸ ಪ್ರತಿಷ್ಠಾಪನೆ ಮಹೋತ್ಸವ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.

‘ಜಗತ್ತಿನಲ್ಲಿ ಬಲುದೊಡ್ಡ ರಾಷ್ಟ್ರ ನಮ್ಮದು. ಅನೇಕ ವೈವಿಧ್ಯವನ್ನು ಹೊಂದಿದ್ದರೂ ಧಾರ್ಮಿಕ, ಸಂಸ್ಕಾರದಲ್ಲಿ ಒಳಿತಿಗಾಗಿರುವ ಆಶಯ ಮಾತ್ರ ಒಂದಾಗಿದೆ. ಗ್ರಾಮಗಳಲ್ಲಿ ಸಾಮರಸ್ಯ ಬೆಸೆಯಲು ದೇಗುಲ ಪರಂಪರೆ, ಧಾರ್ಮಿಕ, ಆಧ್ಯಾತ್ಮಿಕ ಆಚರಣೆಯ ನಂಬುಗೆ ವಿಶೇಷವಾಗಿದೆ. ಹಿರಿಯರ ಆದರ್ಶವನ್ನು ಪಾಲಿಸಲು ಗ್ರಾಮೀಣ ಯುವಕರ ಮನಸ್ಸು ಒಂದಾಗಿರುವುದು ಆರೋಗ್ಯಕರ ಬೆಳವಣಿಗೆ’ ಎಂದರು.

‘ದೇಗುಲ, ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ. ಯುವಕರು ಜಾಗರೂಕರಾಗಿ ಸನ್ನಡತೆಯಿಂದ ಧರ್ಮ, ಭಗವಂತನ ಆರಾಧನೆಗೆ ಮುಂದಾಗಿ’ ಎಂದು ಸಲಹೆ ನೀಡಿದರು.

ಗ್ರಾಮವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ವಿವಿಧ ರಂಗವಲ್ಲಿ ಬಿಡಿಸಿ, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಅನ್ನ ದಾಸೋಹ ಏರ್ಪಡಿಸಲಾಗಿತ್ತು. ತೊಳನೇಶ್ವರ, ಬಸವೇಶ್ವರ, ಮಹಾಗಣಪತಿ, ಸುಬ್ರಹ್ಮಣ್ಯ, ವಿಮಾನ ಕಳಸ, ಮಹಾಕುಂಭಾಭಿಷೇಕ ಸನ್ನಿವೇಶ ಸವಿಯಲು ತುಳಸಿ, ತುಳಸಿಗೇಟ್, ಅಂಕನಹಳ್ಳಿ, ಐಕನಹಳ್ಳಿ, ಭದ್ರನಕೊಪ್ಪಲು, ಬಸವನಹಳ್ಳಿ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಭಾಗವಹಿಸಿದ್ದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ.ಗಂಗಾಧರ್, ಕೆಪಿಸಿಸಿ ಸದಸ್ಯ ಸುರೇಶ್, ಮನ್ಮುಲ್ ನಿರ್ದೇಶಕ ಶೀಳನೆರೆ ಅಂಬರೀಷ್, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್, ಬಿ. ಪ್ರಕಾಶ್, ಮುಖಂಡರಾದ ಮಾದಾಪುರ ರಾಮಕೃಷ್ಣೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್, ಚಂದ್ರೇಗೌಡ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-40-1644620751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.