ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಜೈವಿಕ ಗೊಬ್ಬರ, ಲಘು ಪೋಷಕಾಂಶ ಬಳಸಿ: ಇಳುವರಿ ಹೆಚ್ಚಿಸಲು ಉಪಯುಕ್ತ ಸಲಹೆ

ಭತ್ತ ಬೆಳೆಯುವ ರೈತರಿಗೆ ‘ಗುಂಪು ಕರೆ’
Published : 11 ಆಗಸ್ಟ್ 2024, 4:32 IST
Last Updated : 11 ಆಗಸ್ಟ್ 2024, 4:32 IST
ಫಾಲೋ ಮಾಡಿ
Comments

ಮಂಡ್ಯ: ಜಿಲ್ಲೆಯಲ್ಲಿರುವ ಎಲ್ಲಾ ಭತ್ತ ಬೆಳೆಗಾರರಿಗೆ ಭತ್ತದ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಅನುಸರಿಸಬೇಕಾದ ಬೇಸಾಯ ಕ್ರಮಗಳು ಹಾಗೂ ಜೈವಿಕ ಗೊಬ್ಬರ, ಲಘು ಪೋಷಕಾಂಶ ಬಳಕೆಯ ಬಗ್ಗೆ ಮಂಡ್ಯ, ಮದ್ದೂರು, ಮಳವಳ್ಳಿ ತಾಲ್ಲೂಕಿನ ಸರಿಸುಮಾರು 45,000 ಭತ್ತ ಬೆಳೆಯುವ ರೈತರಿಗೆ ಕಡಿಮೆ ಅವಧಿಯಲ್ಲಿ ಗುಂಪು ಕರೆ (Group Call)ಯ ಮೂಲಕ ಕೃಷಿ ಇಲಾಖೆ ಮಂಡ್ಯ ಉಪವಿಭಾಗದ ಉಪನಿರ್ದೇಶಕಿ ಕೆ. ಮಾಲತಿ ಮಾಹಿತಿ ನೀಡಿದರು.

ಕೃಷಿ ಇಲಾಖೆಯಿಂದ ಎಲ್ಲಾ ಭತ್ತ ಬೆಳೆಗಾರರಿಗೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಹಯೋಗದೊಂದಿಗೆ ‘ಭತ್ತದ ಬೆಳೆಯಲ್ಲಿ ಇಳುವರಿ ಹೆಚ್ಚಿಸಲು ಅನುಸರಿಸಬೇಕಾದ ಬೇಸಾಯ ಕ್ರಮಗಳು ಹಾಗೂ ಜೈವಿಕ ಗೊಬ್ಬರ, ಲಘು ಪೋಷಕಾಂಶ ಬಳಕೆ’ ಬಗ್ಗೆ ಭತ್ತ ಬೆಳೆಯುವ ರೈತರಿಗೆ ಗುಂಪು ಕರೆ ಮಾಡಿ ಸಂವಾದ ನಡೆಸಿದರು.

ಶಿಫಾರಸು ಮಾಡಿದ ತಳಿ ಬಳಸಿ: ‘ರೈತರಿಗೆ ಅವಶ್ಯಕತೆ ಇರುವ ಬಿತ್ತನೆ ಬೀಜಗಳನ್ನು (ಭತ್ತ, ರಾಗಿ. ದ್ವಿದಳ ಧಾನ್ಯ ಹಾಗೂ ಇತರೆ) ರೈತ ಸಂಪರ್ಕ ಕೇಂದ್ರ, ಸಹಕಾರ ಸಂಘ ಹಾಗೂ ಎಫ್.ಪಿ.ಒ.ಗಳ ಮುಖಾಂತರ ಸಹಾಯಧನದಲ್ಲಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ ಹಾಗೂ ಖಾಸಗಿ ಬಿತ್ತನೆ ಬೀಜ ಮಾರಾಟಗಾರರಿಂದ ಬಿತ್ತನೆ ಬೀಜಗಳನ್ನು ಮಾರಾಟ ಮಾಡಲಾಗುತ್ತಿದ್ದು, ರೈತರು ಜಿಲ್ಲೆಗೆ ಶಿಫಾರಸು ಮಾಡಲಾದ ತಳಿಗಳನ್ನು ಮಾತ್ರ ಬಳಕೆ ಮಾಡಬೇಕು’ ಎಂದು ಮಾಲತಿ ತಿಳಿಸಿದರು.

ಜೈವಿಕ ಗೊಬ್ಬರಗಳಾದ ಅಶೋಸ್ಟೆರಿಲಂ, ಸೂಕ್ಷ್ಮಾಣು ಜೀವಿಗಳ ಸಮೂಹ ಒಳಗೊಂಡ ಜೀವಾಣು ಗೊಬ್ಬರಗಳು (ಜಿಂಕ್, ಬೋರಾನ್ ಮತ್ತು ಜಿಪ್ಸಂ) ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು ಕಾಲಕಾಲಕ್ಕೆ ಭೂಮಿಗೆ ಸೇರಿಸಿ ಉತ್ತಮ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ಭತ್ತದಲ್ಲಿ ಹೆಚ್ಚಿನ ಇಳುವರಿ ಪಡೆಯಲು ರೈತರಿಗೆ ತಿಳಿಸಿದರು.

ಜೀವಾಣು ಗೊಬ್ಬರ ಬಳಸಿ: ವಿ.ಸಿ.ಫಾರಂ ಕೃಷಿ ಮಹಾವಿದ್ಯಾಲಯದ ಕೃಷಿ ಸೂಕ್ಷ್ಮಾಣು ಜೀವಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಆಶಾ ಎನ್.ಎನ್. ಮಾತನಾಡಿ, ‘ಅವೈಜ್ಞಾನಿಕ ಕೃಷಿ ಯಥೇಚ್ಛವಾಗಿ ರಾಸಾಯನಿಕಗಳ ಬಳಕೆ, ಮಣ್ಣಿನ ಸವಕಳಿಯಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಹಾಗಾಗಿ ಮಣ್ಣಿನ ಆರೋಗ್ಯ ರಕ್ಷಣೆಯ ಮೂಲಕ ರೈತರಿಗೆ ಉತ್ಪಾದನೆ ಹೆಚ್ಚಳಕ್ಕೆ ಬೇಕಾಗಿರುವ ಜೀವಾಣು ಗೊಬ್ಬರಗಳ ಉಪಯೋಗಗಳ ಅರಿವು ಮೂಡಿಸುವುದು ಅಗತ್ಯ ಎಂದರು.

ಮಂಡ್ಯ ವಲಯ ಸಂಶೋಧನಾ ಕೇಂದ್ರ ಬೇಸಾಯ ಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ತಿಮ್ಮೇಗೌಡ ಅವರು ಭತ್ತದ ಇಳುವರಿ ಹೆಚ್ಚಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು. ಭತ್ತದಲ್ಲಿ ಸುಸ್ಥಿರ ಇಳುವರಿಯನ್ನು ಪಡೆಯಲು ಎಕರೆಗೆ 4 ಟನ್ ಕೊಟ್ಟಿಗೆ ಗೊಬ್ಬರವನ್ನು ಮಣ್ಣಿಗೆ ಸೇರಿಸುವುದು ಅಥವಾ ಹಸಿರೆಲೆ ಗೊಬ್ಬರ ಗಿಡಗಳಾದ ಸಂಜೆ, ಅಪ್ಪಣಿಗೆ, ಹುರುಳಿ ಇತ್ಯಾದಿಗಳನ್ನು ಮಣ್ಣಿಗೆ ಸೇರಿಸಬೇಕು. ನಾಟಿ ತಡವಾದಲ್ಲಿ ಸಾಂಪ್ರದಾಯಿಕ ನಾಟಿ ಪದ್ಧತಿಗೆ ಬದಲಾಗಿ ನೇರ ಬಿತ್ತನೆಯನ್ನು ಕೈಗೊಳ್ಳವುದು ಉತ್ತಮ. 

ಸಭೆಯಲ್ಲಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಸುನೀತ, ದೀಪಕ್, ಪ್ರತಿಭಾ ಇದ್ದರು. 

ಅತಿಯಾದ ಯೂರಿಯಾ; ಭತ್ತ ಇಳುವರಿ ಕುಂಠಿತ

ಮಂಡ್ಯ ಜಿಲ್ಲೆಯ ಭತ್ತದ ಇಳುವರಿ ಈಗಾಗಲೇ ರಾಜ್ಯದ ಸರಾಸರಿಗೆ ಹೋಲಿಸಿದರೆ ಜಿಲ್ಲೆ ಮತ್ತು ತಾಲ್ಲೂಕುಗಳ ಇಳುವರಿ ಕಡಿಮೆ ಇರುವುದು ಕಂಡಬಂದಿದ್ದು ಇದಕ್ಕೆ ಮುಖ್ಯ ಕಾರಣಗಳು ಅತಿಯಾದ ಯೂರಿಯಾ ಬಳಕೆ. ಸಮತೋಲನ ಪೋಷಕಾಂಶಗಳನ್ನು ಬಳಕೆ ಮಾಡದೇ ಇರುವುದು ಹಾಗೂ ಯಥೇಚ್ಛವಾಗಿ ನೀರನ್ನು ಹರಿಸುವುದರಿಂದ ಮಣ್ಣು ಸತ್ವ ಕಳೆದುಕೊಂಡಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT