ಮಂಡ್ಯದಲ್ಲಿ ಘರ್ಷಣೆ: ಜೆಡಿಎಸ್‌ ಕಾರ್ಯಕರ್ತರ ಮೇಲೆ ಹಲ್ಲೆ 

ಬುಧವಾರ, ಏಪ್ರಿಲ್ 24, 2019
33 °C

ಮಂಡ್ಯದಲ್ಲಿ ಘರ್ಷಣೆ: ಜೆಡಿಎಸ್‌ ಕಾರ್ಯಕರ್ತರ ಮೇಲೆ ಹಲ್ಲೆ 

Published:
Updated:

ಮಂಡ್ಯ: ಭಾರತೀನಗರ ಸಮೀಪದ ಗುರುದೇವನಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಪಕ್ಷೇತರ ಅಭ್ಯರ್ಥಿ ಸುಮಲತಾ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಜೆಡಿಎಸ್ ಕಾರ್ಯಕರ್ತರಾದ ಅನಿಲ್, ಕಾರ್ತಿಕ್ ಎಂಬುವರು ಘಟನೆಯಲ್ಲಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾತ್ರಿ 9 ಗಂಟೆಯಲ್ಲಿ ಸುಮಲತಾ ಗುರುದೇವನಹಳ್ಳಿಯಲ್ಲಿ ಪ್ರಚಾರಕ್ಕೆ ಬರಬೇಕಾಗಿತ್ತು. ಜನ ಕಾಯುತ್ತಿದ್ದರು. ಈ ವೇಳೆ ಕಾರ್ತಿಕ್ ಹಾರ್ನ್‌ ಮಾಡುತ್ತಾ ಬೈಕ್‌ನಲ್ಲಿ ಬಂದಿದ್ದಾರೆ. ನಿಧಾನವಾಗಿ ತೆರಳುವಂತೆ ಜನರು ಹೇಳಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಘರ್ಷಣೆ ಉಂಟಾಗಿದೆ. ಅನಿಲ್‌ ಮತ್ತು ಕಾರ್ತಿಕ್‌ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ಭಾರತೀನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಖಿಲ್ ಭೇಟಿ: ವಿಷಯ ತಿಳಿಯುತ್ತಲೇ ಜೆಡಿಎಸ್‌ ಅಭ್ಯರ್ಥಿ ನಿಖಿಲ್ ಕುಮಾರ್‌ ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. 'ಗಾಯಾಳುಗಳಿಗೆ ನ್ಯಾಯ ಕೊಡಿಸುತ್ತೇನೆ. ಕಾರ್ಯಕರ್ತರು ದುಡುಕಿನಿಂದ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು' ನಿಖಿಲ್ ಹೇಳಿದರು.

ಬರಹ ಇಷ್ಟವಾಯಿತೆ?

  • 8

    Happy
  • 3

    Amused
  • 0

    Sad
  • 0

    Frustrated
  • 8

    Angry

Comments:

0 comments

Write the first review for this !