ಕೆ.ಆರ್.ಪೇಟೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಮನೆ–ಮನೆಗೆ ಗಂಗೆ’ (ಜಲಜೀವನ್ ಮಿಷನ್) ಯೋಜನೆ ತಾಲ್ಲೂಕಿನಲ್ಲಿ ಜಾರಿಯಾಗಿದ್ದರೂ ಹಲವು ವಿಘ್ನಗಳಿಂದ ಕುಂಟುತ್ತಾ ಸಾಗಿದೆ. ಮನೆಗಳಿಗೆ ನಲ್ಲಿ ಬಂದರೂ, ನೀರು ಬರುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ಗ್ರಾಮೀಣ ಕರ್ನಾಟಕದ ಪ್ರತಿಯೊಂದು ಮನೆಗೂ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಒದಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಿದು. ಯೋಜನೆಯ ಟೆಂಡರ್ ಪಡೆದವರು ಮತ್ತು ಉಸ್ತುವಾರಿ ವಹಿಸಿಕೊಂಡವರ ನಿರ್ಲಕ್ಷ್ಯದಿಂದ ಯೋಜನೆ ಆರಂಭಿಕ ಹಂತದಲ್ಲೇ ಹಳ್ಳ ಹಿಡಿದಿದೆ.

350 ಕಾಮಗಾರಿಗಳಲ್ಲಿ 323 ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಇನ್ನೂ 25 ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಇನ್ನೂ 2 ಕಾಮಗಾರಿಗಳು ಆರಂಭವೇ ಆಗಿಲ್ಲ. ‘ಜೆಜೆಎಂ’ ಯೋಜನೆಯಡಿ ಪೈಪ್ ಲೈನ್ ಹಾಕುವ ಸಂದರ್ಭದಲ್ಲಿ ರಸ್ತೆಯನ್ನು ಅಗೆಯಲಾಗಿದ್ದು, ಸರಿಯಾಗಿ ಮುಚ್ಚಿಲ್ಲ ಎಂದು ಸಾಕಷ್ಟು ದೂರುಗಳು ಸಾರ್ವಜನಕರಿಂದ ಕೇಳಿಬಂದಿವೆ.

ಅನುದಾನ ಲಭ್ಯವಿಲ್ಲದಿರುವ ಕಾರಣ ಗುತ್ತಿಗೆದಾರರು ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ನೀರು ಕೊಡುವುದಿರಲಿ ಇಡೀ ರಸ್ತೆಯನ್ನು ಹಾಳು ಮಾಡಿ ಜನ ಹೊಂಡ ಗುಂಡಿಗೆ ಬೀಳುವಂತೆ ಮಾಡಿದ್ದಾರೆಂದು ಜನ ಆರೋಪಿಸುತ್ತಾರೆ.

‘ಈ ಯೋಜನೆಯ ಮೂಲಕ ಇಡೀ ತಾಲ್ಲೂಕಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡುವಲ್ಲಿ ಇನ್ನೂ ಯಶಸ್ವಿಯಾಗಿಲ್ಲದಿರುವುದು ನಾಚಿಕೆಗೇಡಿನ ವಿಚಾರ. ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಪಟ್ಟಣದ ಪುರಸಭೆ ಮತ್ತು ತಾಲ್ಲೂಕು ಆಡಳಿತ ವಿಫಲವಾಗಿದೆ’ ಎಂದು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಎಸ್. ಸುರೇಶ್ ಆರೋಪಿಸಿದರು.

‘ಸದ್ಯ ಯಾವ ಗ್ರಾಮಕ್ಕೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಿದೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಟಾಸ್ಕ್ ಪೋರ್ಸ್ ನಿರಂತರ ಗಮನಹರಿಸಿದ್ದು ಅನುದಾನದ ಕೊರತೆಯಿಲ್ಲ’ ಎಂದು ಟಾಸ್ಕ್ ಪೋರ್ಸ್ ಸಮಿತಿಯ ಮುಖ್ಯಸ್ಥರಾದ ತಹಶೀಲ್ದಾರ್ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-40-1902784175

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.