ಗುರುವಾರ , ಡಿಸೆಂಬರ್ 5, 2019
25 °C

ಕೆ.ಆರ್‌.ಪೇಟೆ | ಅನರ್ಹರಿಗೆ ಪ್ರವೇಶವಿಲ್ಲ: ಮನೆ ಮುಂದೆ ಚೀಟಿ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

Prajavani

ಹೆಮ್ಮನಹಳ್ಳಿ (ಮಂಡ್ಯ ಜಿಲ್ಲೆ): ಉಪ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ಮನೆಮನೆ ಭೇಟಿ ಆರಂಭವಾಗಿದೆ. ಆದರೆ ಇಲ್ಲಿಯ ಹಳ್ಳಿಯೊಂದರ ಗ್ರಾಮಸ್ಥರು ತಮ್ಮ ಮನೆ ಬಾಗಿಲಿನ ಮೇಲೆ ‘ಅನರ್ಹ ಶಾಸಕರಿಗೆ ನಮ್ಮ ಮನೆಗೆ ಪ್ರವೇಶವಿಲ್ಲ’ ಎಂದು ಚೀಟಿ ಅಂಟಿಸಿದ್ದಾರೆ.

ತಾಲ್ಲೂಕಿನ ಹೆಮ್ಮನಹಳ್ಳಿ ಗ್ರಾಮದ 20ಕ್ಕೂ ಹೆಚ್ಚು ಮನೆಗಳ ಮುಂದೆ ಈ ಚೀಟಿ ಅಂಟಿಸಲಾಗಿದೆ. ಚೀಟಿಯ ಮೇಲ್ಭಾಗದಲ್ಲಿ ‘ಸರ್ವೋಚ್ಛ ನ್ಯಾಯಾಲಯ ಅನರ್ಹಗೊಳಿಸಿದ ಶಾಸಕರು’ ಎಂಬ ಸಾಲೂ ಇದೆ.

ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಚುನಾವಣಾಧಿಕಾರಿಗಳು ಚೀಟಿ ಕಿತ್ತು ಹಾಕಿದ್ದಾರೆ. ‘ಗ್ರಾಮಸ್ಥರು ಈ ಚೀಟಿ ಅಂಟಿಸಿಲ್ಲ, ಜೆಡಿಎಸ್‌ ಮುಖಂಡರೇ ಈ ಕೆಲಸ ಮಾಡಿದ್ದಾರೆ’ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

ಪ್ರತಿಕ್ರಿಯಿಸಿ (+)