ಬೆಳಕವಾಡಿ: ಸಮೀಪದ ಕಗ್ಗಳ ಗ್ರಾಮದಲ್ಲಿ ಅರಸು ಮನೆತನದಿಂದ ಸೋಮವಾರ ಶಿವಪುರ ಬಸವೇಶ್ವರ, ಕಂಬಿ ದೇವರು ಪಾರ್ವತಮ್ಮ, ಮಹದೇಶ್ವರ ಹುಲಿವಾಹನ ಮೂರ್ತಿಯ ಮೆರವಣಿಗೆ, ವಿಶೇಷ ಪೂಜೆ ಕೈಂಕರ್ಯಗಳು ನಡೆದವು.

ಬೆಳಿಗ್ಗೆ ಗ್ರಾಮದ ಹೊರವಲಯದ ಶಿವಪುರ ಬಸವೇಶ್ವರ ದೇವಸ್ಥಾನದಲ್ಲಿ ದೇವರಿಗೆ ವಿವಿಧ ಹೂವುಗಳಿಂದ ಅಲಂಕಾರ, ಕುಂಕುಮಾರ್ಚನೆ, ನೈವೇದ್ಯ, ಪೂಜೆ, ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿನಿಯೋಗವನ್ನು ಅರ್ಚಕ ಮಹೇಶ್ ನೆರವೇರಿಸಿದರು.

ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು. ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಗ್ರಾಮವು ಹಸಿರು ತೋರಣ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.

ರಾತ್ರಿ ದೇವಸ್ಥಾನದ ಆವರಣದಲ್ಲಿ ಹುಲ್ಲಂಬಳ್ಳಿಯ ಕಂಬಿ ದೇವರು ಪಾರ್ವತಮ್ಮ, ಕಗ್ಗಳ ಬಸವೇಶ್ವರ ದೇವರ ಮೂರ್ತಿಗಳನ್ನು ಟ್ರಾಕ್ಟರ್ನಲ್ಲಿ ಇಟ್ಟು ಹಾಗೂ ಸರಗೂರು ಮಹದೇಶ್ವರ ಹುಲಿವಾಹನ ಮೂರ್ತಿಗೆ ವಿವಿಧ ಹೂವುಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಹುಲಿ ವಾಹನ ಮೂರ್ತಿಯನ್ನು ಯುವಕರು ಹೊತ್ತು ಮಂಗಳವಾದ್ಯಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ದೇವರನ್ನು ದೇವಸ್ಥಾನಕ್ಕೆ ತಂದು ಇರಿಸಲಾಯಿತು. ಯಜಮಾನ ಕೆ.ವಿ.ವೀರ ರಾಜೇ ಅರಸು, ಪಟೇಲ್ ಬಾಲಮಾದ ರಾಜೇ ಅರಸು, ಮುಖಂಡರಾದ ಕೆ.ವಿ.ಸುಬ್ರಮಣ್ಯ ರಾಜೇ ಅರಸು, ನಂಜೇ ರಾಜೇ ಅರಸು, ಹರ್ಷ ಅರಸು, ಮನೋಜ್ ಅರಸು, ಚಂದು ಅರಸು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-40-1388693734

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.