ಪಾಂಡವಪುರ: ‘ತಾಲ್ಲೂಕಿನ ಚಿನಕುರಳಿ ಹೋಬಳಿ ಕೇಂದ್ರದ ಕನಗನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಅಗ್ನಿಶಾಮಕ ಠಾಣೆಯನ್ನು ನಿರ್ಮಿಸಲು 2 ಎಕರೆ ಸರ್ಕಾರಿ ಭೂಮಿಯನ್ನು ಹಸ್ತಾಂತರ ಮಾಡಲಾಗಿದೆ’ ಎಂದು ತಹಶೀಲ್ದಾರ್ ಬಸವರಡ್ಡೆಪ್ಪ ತಿಳಿಸಿದರು.

ಗ್ರಾಮದ ಸ.ನಂ.4ರಲ್ಲಿನ ಗೋಮಾಳವನ್ನು ಅಳತೆ ಮಾಡಿ ಗಡಿ ಗುರುತಿಸಿ ಅಗ್ನಿಶಾಮಕ ಇಲಾಖೆಗೆ ಕಂದಾಯ ಇಲಾಖೆಯಿಂದ ಭೂಮಿ ಹಸ್ತಾಂತರ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಾಂಡವಪುರದ ಹಾರೋಹಳ್ಳಿ ಗ್ರಾಮದ ಬಳಿ ಒಂದೇ ಒಂದು ಅಗ್ನಿಯನ್ನು ಠಾಣೆ ಇದ್ದ ಕಾರಣ ಬೇರೆ ಕಡೆ ಅಗ್ನಿಶಾಮಕ ಠಾಣೆ ಇರಲಿಲ್ಲ. ಹೀಗಾಗಿ ಕನಗನಹಳ್ಳಿ ಬಳಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆ, ಅಪಘಾತ ಅಥವಾ ಬೆಂಕಿ ಪ್ರಕರಣ ಸಂಭವಿಸಿದಾಗ ಅಗ್ನಿಶಾಮಕ ಠಾಣೆ ನಿರ್ಮಾಣದಿಂದಾಗಿ ಈ ಭಾಗದ ಜನರಿಗೆ ಬಹಳ ಅನುಕೂಲವಾಗಲಿದೆ’ ಎಂದು ಹೇಳಿದರು.

ಮೈಸೂರು ವಲಯದ ಅಗ್ನಿಶಾಮಕ ಠಾಣೆಯ ಪ್ರಾದೇಶಿಕ ಅಧಿಕಾರಿ ಪಿ.ಚಂದನ್ ಮಾತನಾಡಿದರು.ಮಂಡ್ಯ ಜಿಲ್ಲೆಯ ಅಗ್ನಿಶಾಮಕ ಠಾಣೆಯ ಪ್ರಭಾರ ಠಾಣಾಧಿಕಾರಿ ಚಂದ್ರಶೇಖರ್ ಮಾದರ್, ಪ್ರಮುಖ ಅಗ್ನಿಶಾಮಕ ಹರೀಶ್, ಕಾಂತರಾಜು, ರವಿ ಹಾಗೂ ಸಿಬ್ಬಂದಿ ಪರಶುರಾಮ್ ಕಾಕಡೆ, ಆನಂದ, ಪಾಟೀಲ್, ವಿಜಯ್ ಗೆಜ್ಜೆ, ರಾಹುಲ್, ಪ್ರಜ್ವಲ್, ರಿಜ್ವಾನ್ ಬಾಗೇವಾಡಿ, ಅನಿಲ, ನವೀನ್ ಕುಮಾರ್, ಅರುಣ್ ಇತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-40-359740907

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.